ರಾಜಕೀಯ

ನನಗೆ ಡಿಸಿಎಂ ಹುದ್ದೆ ಬೇಕಿಲ್ಲ: ಕೊಡುವುದಾದರೇ ಸಿಎಂ ಹುದ್ದೆನೆ ಕೊಡಲಿ: ಉಮೇಶ್ ಕತ್ತಿ

Vishwanath S

ಬೆಂಗಳೂರು: ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಗೆದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಸರ್ಕಾರವನ್ನು ಸೇಫ್ ಮಾಡಿಕೊಂಡಿದ್ದಾರೆ. ಆದರೆ ಇದೀಗ ಸಚಿವ ಸಂಪುಟ ವಿಸ್ತರಣೆ ಯಡಿಯೂರಪ್ಪನವರಿಗೆ ಕಗ್ಗಂಟಾಗಿ ಪರಿಣಮಿಸಿದ್ದು ಬಿಜೆಪಿಯೊಳಗೆ ಸಚಿವಕಾಂಕ್ಷಿಗಳ ಪಟ್ಟಿ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ.

ವಿಧಾನಸೌಧದಲ್ಲಿ ಮಾತನಾಡಿದ ಉಮೇಶ್ ಕತ್ತಿ ಅವರು ನಾನು 8 ಬಾರಿ ಶಾಸಕನಾಗಿ ಗೆದ್ದು ಬಂದಿದ್ದೇನೆ. ನಾನು ಸಿಎಂ ಹುದ್ದೆ ಆಕಾಂಕ್ಷಿಯೇ ಹೊರತು ಡಿಸಿಎಂ ಹುದ್ದೆ ನನಗೆ ಬೇಕಿಲ್ಲ. ಡಿಸಿಎಂ ಬದಲಿಗೆ ನನಗೆ ಸಚಿವ ಸ್ಥಾನ ನೀಡಲಿ ಎಂದು ಹೇಳಿದ್ದಾರೆ. 

ಪಕ್ಷದಲ್ಲಿ ಹಿರಿಯ ಶಾಸಕನಾಗಿರುವ ನನಗೆ ಯಾವ ಸ್ಥಾನ ನೀಡಬೇಕೆಂದು ಅವರೇ ತೀರ್ಮಾನಿಸಲಿ. ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ನಾನು ಸದಾ ಬದ್ಧನಾಗಿದ್ದೇನೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ. 

SCROLL FOR NEXT