ರಾಜಕೀಯ

ಶಿವಾಜಿನಗರ:  ಪಾಸಿಟಿವ್ ಪ್ರಚಾರ ರಿಜ್ವಾನ್ ಹರ್ಷದ್ ಗೆಲುವಿಗೆ ಕಾರಣ!

Shilpa D

ಬೆಂಗಳೂರು: ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಚಾರದ ವೇಳೆ ಅನರ್ಹ ಶಾಸಕರನ್ನು ಟಾರ್ಗೆಟ್ ಮಾಡಿತ್ತು, ಪಕ್ಷ ದ್ರೋಹಿಗಳು ನಮಕ್ ಹರಾಮ್ ಎಂದೆಲ್ಲಾ  ಮಾತನಾಡಿ ಪ್ರಚಾರದ ವೇಳೆ ಗಂಟಲು ಹರಿದುಕೊಂಡಿದ್ದರು.  

ಆದರೆ ಶಿವಾಜಿನಗರ ಪ್ರಚಾರ ಮಾತ್ರ ವಿಭಿನ್ನವಾಗಿತ್ತು,  ಮನೆ ಮನೆಗೆ ತೆರಳಿ, ಸ್ಥಳೀಯ ಸಮಸ್ಯೆಗಳ ಬಗ್ಗೆ  ಮಾತನಾಡಿ ಶಾಂತವಾಗಿ, ಪ್ರಚಾರ ನಡೆಸಲಾಗಿತ್ತು.  ನೆಗೆ ತೆರಳುತ್ತಿದ್ದ ಪ್ರಚಾರ ತಂಡ ಈರುಳ್ಳಿ ಬೆಲೆ ಏಕೆ ಅಷ್ಟು ಗಗನಕ್ಕೇರಿದೆ ಎಂದು ಗೃಹಿಣಿಯರನ್ನು ಪ್ರಶ್ನಿಸುತ್ತಿದ್ದರು. ಜೊತೆಗೆ ಬೆಲೆ ಅಷ್ಚು ಏರಿಕೆಯಾಗಲು ಯಾರು ಕಾರಣ ಎಂಬುದನ್ನು ತಿಳಿಸುತ್ತಿದ್ದರು.

ಇನ್ನೂ ಜೈನ ಸಮುದಾಯದವರು ಈರುಳ್ಳಿ ಬಳಸುವುದಿಲ್ಲ ಎಂಬುದನ್ನು ಅರಿತಿದ್ದ ಪ್ರಚಾರ ತಂಡ , ತಮ್ಮ ಉದ್ಯಮ ವ್ಯವಹಾರ ಏಕೆ ಕುಸಿಯುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದರು. ಜೊತೆಗೆ ಕೇಂದ್ರ ಸರ್ಕಾರದ ಹಣ ಅಪಮೌಲ್ಯ ಹಾಗೂ ಜಿಎಸ್ ಟಿ ನೀತಿ ನಿಯಮಗಳಿಂದಾಗಿ ವ್ಯವಹಾರ ಉದ್ಯಮ ಕುಸಿಯುತ್ತಿದೆ ಎಂದು ಮನದಟ್ಟು ಮಾಡುತ್ತಿದ್ದರು.  ಇಡೀ ಪ್ರಚಾರದುದ್ದಕ್ಕೂ ಎಲ್ಲಿಯೂ ಪರಧಾನಿ ಮೋದಿ ಬಗ್ಗೆ ಕೆಟ್ಟ ಮಾತನಾಡಲಿಲ್ಲ, ಯೋಚಿಸಿ ಮತ ನೀಡಿ ಎಂದಷ್ಟೇ ಹೇಳುತ್ತಿದ್ದರು.

ಬೆಂಗಳೂರಿನ ಒಂದು ಕ್ಷೇತ್ರದಲ್ಲಿ ಮಾತ್ರ ಗಲುವು ಕಂಡಿದೆ, ಅದು ರಿಜ್ವಾನ್ ಅರ್ಷದ್ ದೆಸೆಯಿಂದಾಗಿ. ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಿಜ್ವಾನ್ ಎರಡು ಬಾರಿ ಸೋತಿದ್ದರು.  ಮುಸ್ಲಿಂ ಸಮುದಾಯವೇ ಅಧಿಕವಾಗಿರುವ ಶಿವಾಜಿನಗರದಲ್ಲಿ ಯಾವ ರೀತಿಯ ಪ್ರಚಾರ ಕೈಗೊಳ್ಳಬೇಕು ಎಂದು ಮೊದಲೇ ರಣತಂತ್ರ ರೂಪಿಸಲಾಗಿತ್ತು. 

ಇಲ್ಲಿನ ಅನೇಕ ಮನೆಗಳಲ್ಲಿ ನಿರುದ್ಯೋಗಿಗಳಿದ್ದಾರೆ,  ಪ್ರಚಾರ ತಂಡ ನಿರುದ್ಯೋಗದ ಬಗ್ಗೆ ಪ್ರತ್ಯೇಕ ಕರ ಪಂತ್ರ ಹಂಚಿತ್ತು, ಹಾಗೂ ಉದ್ಯೋಗಗಳು ಕಡಿಮೆಯಾಗಲು ಯಾವ ನೀತಿನಿಯಯಮಗಳು ಕಾರಣ ಎಂಬ ಬಗ್ಗೆ ವಿರಿಸಲಾಗುತ್ತಿತ್ತು. ಈ ರೀತಿಯ ಪ್ರಚಾರ ಶೈಲಿ ಬಹುತೇಕ ಯುವಕರನ್ನು ಆಕರ್ಷಿಸಿತ್ತು. 

ಬೇರೆ ಕ್ಷೇತ್ರಗಳ ಅಭ್ಯರ್ಥಿಗಳು ಕಾಂಗ್ರೆಸ್ ಸ್ಟಾರ್ ಪ್ರಚಾರಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ತಮಮ ಪರ ಪ್ರಚಾರ ಮಾಡಬೇಕೆಂದು ಬೇಡಿಕೆ ಇಟ್ಟಿದ್ದವು, ಆದರೆ ರಿಜ್ವಾನ್ ಯಾರನ್ನು ಬರುವಂತೆ ಬೇಡಿಕೆ ಇಟ್ಟಿರಲಿಲ್ಲ,  ಜೆಡಿಎಸ್ ನ ತನ್ವೀರ್ ಅಹಮದ್ ಮತ್ತು ಎಸ್ ಡಿ ಪಿಐ ಪಕ್ಷದ ಅಬ್ದುಲ್ ಹಣ್ಣನ್ ಅವರಿಗೆ  ಅಲ್ಪ ಸಂಖ್ಯಾತ ಮತಗಳು ಹಂಚಿಕಯಾಗುತ್ತವೆ ಎಂಬ ಆತಂಕ ಎದುರಾಗಿತ್ತು,  ಈದರೆ ಕಾಂಗ್ರೆಸ್ ಪ್ರಚಾರ ತಂಡ  ಆತಂಕ ಪಡಲಿಲ್ಲ, 72 ಸಾವಿರ ಮುಸ್ಲಿಮರು ಹಾಗೂ 12 ಸಾವಿರ ಕ್ರಿಶ್ಚಿಯನ್ ಮತಗಳು ತಮಗೆ ಬೀಳುತ್ತವೆ ಎಂಬ ಭರವಸೆಯಲ್ಲಿದ್ದರು.

ಕಳೆದ ಚುನಾವಣೆಯಲ್ಲಿ ರಿಜ್ವಾನ್ ಸೋಲಲು ಬಾಲಾಕೋಟ್ ದಾಳಿ ಕಾರಣವಾಗಿತ್ತು ಎನ್ನಲಾಗಿದೆ,  ಇನ್ನೀ ಜೇವರ್ಗಿ ಶಾಸಕ ಅಜಯ್ ಸಿಂಗ್  ನಡೆಸುತ್ತಿರುವ ಅಪಘಾತ ಪರಿಹಾರ ಕೇಂದ್ರ ಕಚೇರಿ ಜಯಮಹಲ್ ನಲ್ಲಿದೆ ಇಲ್ಲಿ ಸುಮಾರು 170 ಮಂದಿ ಕೆಲಸ  ಮಾಡುತ್ತಿದ್ದಾರೆ,   ಅದರಲ್ಲಿ 120 ಮಂದಿ ಶಿವಾಜಿ ನಗರ ನಿವಾಸಿಗಳು, ಹೀಗಾಗಿ ರಿಜ್ವಾನ್ ಗೆಲ್ಲಲು ಇವರು ಕೂಡ ಕಾರಣರಾಗಿದ್ದಾರೆ.
 

SCROLL FOR NEXT