ಮಲ್ಲಿಕಾರ್ಜುನ್ ಖರ್ಗೆ 
ರಾಜಕೀಯ

ಸಿಬಿಐ ನಿರ್ದೇಶಕರ ನೇಮಕ ವಿಧಾನಕ್ಕೆ ನಮ್ಮ ಆಕ್ಷೇಪವಿದೆ, ಅಧಿಕಾರಿಗಳ ಬಗ್ಗೆ ಅಲ್ಲ: ಖರ್ಗೆ

ಸಿಬಿಐ ನಿರ್ದೇಶಕರ ನೇಮಕ ವಿಧಾನಕ್ಕೆ ನಮ್ಮ ಆಕ್ಷೇಪವಿದೆ, ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ಅಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ...

ನವದೆಹಲಿ: ಸಿಬಿಐ ನಿರ್ದೇಶಕರ ನೇಮಕ ವಿಧಾನಕ್ಕೆ ನಮ್ಮ ಆಕ್ಷೇಪವಿದೆ, ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ಅಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚಿಗೆ ಮಧ್ಯ ಪ್ರದೇಶದ ಮಾಜಿ ಪೊಲೀಸ್ ಮಹಾ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಅವರನ್ನು ಸಿಬಿಐನ ನೂತನ ನಿರ್ದೆಶಕರನ್ನಾಗಿ ನೇಮಿಸಿದ್ದಕ್ಕೆ ಖರ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಕುರಿತು ತಮ್ಮ ಬ್ಲಾಗ್ ನಲ್ಲಿ ಪ್ರತಿಕ್ರಿಯಿಸಿದ್ದ ಜೇಟ್ಲಿ, ವಿರೋಧ ವ್ಯಕ್ತಿಪಡಿಸುವುದೇ ರಾಜಕೀಯ ಅಸ್ತ್ರವಾಗಬಾರದು. ಅದು ಖರ್ಗೆ ಅವರ ರೀತಿಯ ವಿರೋಧವೂ ಆಗಬಾರದು, ಮುಕ್ತ ಮನಸ್ಸಿನ ವಿರೋಧವಾಗಿರಬೇಕು. ಆದರೆ ಖರ್ಗೆ ಅವರು ವರ್ಗಾವಣೆ ನೇಮಕಾತಿ ವಜಾ… ಎಲ್ಲದಕ್ಕೂ ರಾಜಕೀಯ ಬಣ್ಣ ಹಚ್ಚುತ್ತಿದ್ದಾರೆ ಎಂದು ಟೀಕಿಸಿದ್ದರು.
ಈ ಸಂಬಂಧ ಇಂದು ಜೇಟ್ಲಿಗೆ ಪತ್ರ ಬರೆದಿರುವ ಖರ್ಗೆ ಅವರು, ಸಿಬಿಐ ನಿರ್ದೇಶಕರ ನೇಮಕ ವಿಧಾನಕ್ಕೆ ನಮ್ಮ ವಿರೋಧವಿದೆ. ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ಅಲ್ಲ. ಸಿಬಿಐ ನಿರ್ದೇಶಕರ ಆಯ್ಕೆ ವಿಧಾನದಿಂದ ಪ್ರಧಾನಿ ಕಚೇರಿ ಮೌಲ್ಯ ಹಾಳಾಗಿದೆ ಎಂದು ದೂರಿದ್ದಾರೆ.
ನೂತನ ಸಿಬಿಐ ನಿರ್ದೇಶಕರಿಗೆ ಸಾಕಷ್ಟು ಅನುಭವ ಇದೆ. ಆ ಅನುಭವದ ಮೂಲಕ ಹಾಳಾಗಿರುವ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯನ್ನು ಮರು ನಿರ್ಮಿಸುವ ವಿಶ್ವಾಸವಿದೆ ಎಂದು ಖರ್ಗೆ ಹೇಳಿದ್ದಾರೆ.
ಅಲೋಕ್ ವರ್ಮಾ ಅವರನ್ನು ವಿವಾದಾತ್ಮಕ ರೀತಿಯಲ್ಲಿ ವಜಾಗೊಳಿಸಿದ ನಂತರ ಸರ್ಕಾರ ಕಳೆದ ಶನಿವಾರ ರಿಷಿ ಕುಮಾರ್ ಶುಕ್ಲಾ ಅವರನ್ನು ಸಿಬಿಐನ ಹೊಸ ನಿರ್ದೆಶಕರನ್ನಾಗಿ ನೇಮಿಸಿದೆ. ಕೂಡಲೇ ಖರ್ಗೆ ಅವರು ಶುಕ್ಲಾ ಅವರ ನೇಮಕವನ್ನು ವಿರೋಧಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಇವರ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ವರ್ತಕರ ಮನವಿಗೆ ಸ್ಪಂದಿಸಿದ ಕೇಂದ್ರ; ದೀಪಾವಳಿ ನಂತರವೇ UPI ಮರ್ಚೆಂಟ್ ಶುಲ್ಕ ಜಾರಿ