ರಾಜಕೀಯ

ಆಪರೇಷನ್ ಕಮಲದ ಆತಂಕ: ಕಾಂಗ್ರೆಸ್ ಸಚಿವರಿಗೆ ಸಿದ್ದರಾಮಯ್ಯ ಭೋಜನಕೂಟ

Lingaraj Badiger
ಬೆಂಗಳೂರು: ರಾಜ್ಯದಲ್ಲಿ ರೆಸಾರ್ಟ್ ರಾಜಕೀಯದ ಬಳಿಕ ಭೋಜನಕೂಟದ ರಾಜಕೀಯ ಆರಂಭವಾಗಿದೆ. ಉಪ ಮುಖ್ಯಮಂತ್ರಿ ಪರಮೇಶ್ವರ್ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಫೆ 6 ರಂದು ಖಾಸಗಿ ಹೋಟೆಲ್ ನಲ್ಲಿ ಭೋಜನಕೂಟ ಆಯೋಜಿಸುವ ಮೂಲಕ ಶಾಸಕರ ವಿಶ್ವಾಸಗಳಿಸುವ ಪ್ರಯತ್ನ ನಡೆಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಸಚಿವರಿಗೆ ಫೆಬ್ರವರಿ 5 ರಂದು ತಮ್ಮ ನಿವಾಸ ಕಾವೇರಿಯಲ್ಲಿ ಭೋಜನ ಕೂಟ ಆಯೋಜಿಸಿದ್ದಾರೆ. 
ಆಪರೇಷನ್ ಕಮಲದ ಆತಂಕ, ಬಜೆಟ್ ಮಂಡನೆ ಸಂದರ್ಭದಲ್ಲಿ ಸರ್ಕಾರ ಪತನಗೊಳಿಸಲು ಬಿಜೆಪಿ ಸಂಚು, ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕರು ಗೈರು ಹಾಜರಿ, ಕೆಪಿಸಿಸಿ ಅಧ್ಯಕ್ಷರು ನೀಡಿದ ನೋಟಿಸ್ ಗೂ ಉತ್ತರ ನೀಡದ ಅತೃಪ್ತ ಶಾಸಕರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಬಿಜೆಪಿಗೆ ಪ್ರತಿ ಆಪರೇಷನ್ ಭೀತಿ ನಡುವೆಯೇ ಸಿದ್ದರಾಮಯ್ಯ ಸಚಿವರಿಗೆ ಭೋಜನ ಕೂಟ ಆಯೋಜಿಸಿರುವುದು ಮಹತ್ವ ಪಡೆದುಕೊಂಡಿದೆ.
ನಾಳಿನ ಭೋಜನಕೂಟದ ಮೂಲಕ ಮೈತ್ರಿ ಸರ್ಕಾರದ ರಕ್ಷಣೆ ಮಾಡುವಂತೆ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ, ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಶಾಸಕಾಂಗ ಸಭೆಗೂ ಮುನ್ನ ಸಿದ್ದರಾಮಯ್ಯ ಸಚಿವರ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.
SCROLL FOR NEXT