ರಾಜಕೀಯ

ಆಪರೇಷನ್ ಆಡಿಯೋ: ಬಿಎಸ್ ವೈ ವಿರುದ್ಧ ಎಸಿಬಿಯಲ್ಲಿ ಎರಡು ದೂರು ದಾಖಲು

Lingaraj Badiger
ಬೆಂಗಳೂರು: ಆಪರೇಷನ್​ ಕಮಲ ಕಾರ್ಯಾರಚರಣೆ ನಡೆಸಿ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮೀಷ ಒಡ್ಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ವಿರುದ್ಧ ಎಸಿಬಿಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. 
ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಅವರು, ಜೆಡಿಎಸ್​ ಶಾಸಕರಿಗೆ ಯಡಿಯೂರಪ್ಪ ಅವರು 10 ಕೋಟಿ ರೂ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿ ಎಸಿಬಿಗೆ ದೂರು ನೀಡಿದ್ದಾರೆ. ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತ ಹನುಮೇಗೌಡ ಎಂಬುವರು ಸಹ ಯಡಿಯೂರಪ್ಪ ಅವರ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ.
ಯಡಿಯೂರಪ್ಪ ಪ್ರಜಾತಂತ್ರ ವ್ಯವಸ್ಥೆಯನ್ನು ಹಾಳು ಮಾಡಲು ವಾಮಮಾರ್ಗ ಹಿಡಿದಿದ್ದಾರೆ. ಕೋಟಿ ಕೋಟಿ ಹಣದ ಆಮಿಷವೊಡ್ಡಿ ಭ್ರಷ್ಟಾಚಾರ ಮಾಡುತ್ತಿದ್ಧಾರೆ. ಹೀಗಾಗಿ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಿ ಎಂದು ಹನುಮೇಗೌಡ ಎಸಿಬಿಗೆ ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ದಿನೇಶ್​ ಕಲ್ಲಹಳ್ಳಿ ಮನವಿ ನೀಡಿದ್ಧಾರೆ. ಜೊತೆಗೆ ನಾಗನಗೌಡ, ಶಿವನಗೌಡ ನಾಯಕ್​ ವಿರುದ್ಧವೂ ಸಹ ದೂರು ಸಲ್ಲಿಸಿದ್ದಾರೆ.
SCROLL FOR NEXT