ರಾಜಕೀಯ

4 ಕೋಟಿ ದಾನಿಗಳು, 3 ಕೋಟಿ ಮನೆಗಳಿಗೆ ಬಿಜೆಪಿ ಧ್ವಜ, ವಿಡಿಯೊ ಕಾನ್ಫರೆನ್ಸ್; ಇದು ಬಿಜೆಪಿಯ ಸದ್ಯದ ಗುರಿ!

Sumana Upadhyaya

ಬೆಂಗಳೂರು: ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು ಬಿರುಸಿನ ಚಟುವಟಿಕೆಗಳಲ್ಲಿ ತೊಡಗಿವೆ. ಭಾರತೀಯ ಜನತಾ ಪಾರ್ಟಿ ಮೂರು ಮುಖ್ಯ ಗುರಿಗಳನ್ನು ಈಡೇರಿಸಲು ಫೆಬ್ರವರಿ 28ಕ್ಕೆ ಗಡುವು ನೀಡಿದೆ.

ಕೇಸರಿ ಪಾಳಯ ನಮೋ ಆಪ್ ನ್ನು ಅಭಿವೃದ್ಧಿಪಡಿಸಲು 34 ಕೋಟಿ ರೂಪಾಯಿ ದೇಣಿಗೆ ನೀಡಲು ಮುಂದೆ ಬಂದಿದೆ. ಕನಿಷ್ಠ ಮೂರು ಕೋಟಿ ಮನೆಗಳಲ್ಲಿ ಪಕ್ಷದ ಧ್ವಜವನ್ನು ನೆಡುವುದು ಮತ್ತು ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶದ ಬಹುತೇಕ ಜನತೆಯ ಜೊತೆ ಸಂಪರ್ಕ ಸಾಧಿಸುವುದು ಪಕ್ಷದ ಮೂರು ಮುಖ್ಯ ತಕ್ಷಣದ ಗುರಿಯಾಗಿದೆ.

ಅಮಿತ್ ಶಾ ನಾಯಕತ್ವದಲ್ಲಿ ಅತಿದೊಡ್ಡ ವಿಡಿಯೊ ಕಾನ್ಫರೆನ್ಸ್ ನಡೆಸಲು ಬಿಜೆಪಿ ಸನ್ನದ್ಧವಾಗಿದ್ದು ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದು ಫೆಬ್ರವರಿ 28ರಂದು ಮಧ್ಯಾಹ್ನ 12.20ರಿಂದ 2 ಗಂಟೆಯೊಳಗೆ. ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರು ಸೇರಿದಂತೆ ಸುಮಾರು 35 ಲಕ್ಷ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ವಿಡಿಯೊ ಕಾನ್ಫರೆನ್ಸ್ ದೇಶದ 18 ಸಾವಿರ ಸ್ಥಳಗಳಲ್ಲಿ ಪ್ರಸಾರವಾಗಲಿದೆ.

ನಮೋ ಆಪ್ ಗೆ ನಾಲ್ಕು ಕೋಟಿ ಕೊಡುಗೆ:
ಲೋಕಸಭೆ ಚುನಾವಣೆಗೆ ಖರ್ಚಿಗೆ ಬಿಜೆಪಿ ಪಕ್ಷದ ಬೆಂಬಲಿಗರು, ಕಾರ್ಯಕರ್ತರು ಮತ್ತು ಕಾರ್ಮಿಕರಲ್ಲಿ ಪಕ್ಷಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಿದೆ. ನಮೋ ಆಪ್ ಮೂಲಕ ಕನಿಷ್ಠ ಸಾವಿರ ರೂಪಾಯಿ ಕೊಡುಗೆ ನೀಡುವಂತೆ ಕೋರಿದೆ. ಈಗಾಗಲೇ 19 ಲಕ್ಷ ರೂಪಾಯಿ ಹಣ ಬಂದಿದೆ.

ಬಿಜೆಪಿ ಧ್ವಜ: ಮನೆಮನೆಗಳಲ್ಲಿ ಬಿಜೆಪಿ ಧ್ವಜ ನೆಡುವ ಅಭಿಯಾನ ಆರಂಭವಾಗಿದ್ದು ಫೆಬ್ರವರಿ 28ಕ್ಕೆ ಮೂರು ಕೋಟಿ ಮನೆಗಳನ್ನು ತಲುಪುವ ಗುರಿ ಇಟ್ಟುಕೊಂಡಿದೆ. ನಿನ್ನೆ ಅದಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ದೆಹಲಿಯಲ್ಲಿ ಚಾಲನೆ ನೀಡಿದರು.

SCROLL FOR NEXT