ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿಯ ಜನಪ್ರಿಯ ಮನ್ ಕೀ ಬಾತ್ ಸುಳ್ಳುಗಳನ್ನು ತುಂಬಿದ ಚೀಲ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈಗ ದೇಶದ ಜನರು ಐದು ವರ್ಷಗಳ ಬಿಜೆಪಿ ದುರಾಡಳಿತವನ್ನು ನೋಡಿದ್ದಾರೆ. ಅಚ್ಚೆ ದಿನ್ ಹೆಸರಿನಲ್ಲಿ ಭಾಷಣ ಮಾಡಿ ನೀಡಿದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.