ರಾಜಕೀಯ

ಸೇಫ್ ಸೀಟ್ ಗಾಗಿ ರಾಹುಲ್ ಗಾಂಧಿ ಹುಡುಕಾಟ: ಬೀದರ್ ನಿಂದ ರಾಹುಲ್ ಸ್ಪರ್ಧೆ?

Shilpa D
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ  ಉತ್ತರ ಕರ್ನಾಟಕದ ಬೀದರ್ ನಲ್ಲಿ ಕಾಂಗ್ರೆಸ್ ವಿಐಪಿ ಅಭ್ಯರ್ಥಿಯನ್ನು  ಕಣಕ್ಕಿಳಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ, ಸದ್ಯ ಬೀದರ್ ನಲ್ಲಿ ಬಿಜೆಪಿ ಸಂಸದರಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಬೀದರ್ ನ 8 ವಿಧಾನಸಭೆ ಕ್ಷೇತ್ರಗಳಲ್ಲಿ 5 ರಲ್ಲಿ ಕಾಂಗ್ರೆಸ್ ಜಯ ಸಾದಿಸಿದೆ,  ಉತ್ತರ ಪ್ರದೇಶದ ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ.  ಅಮೇಥಿಯ 5 ವಿಧಾನಸಭೆ ಕ್ಷೇತ್ರಗಳಲ್ಲಿ  4 ರಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಮತ್ತು ಒಂದರಲ್ಲಿ ಎಸ್ ಪಿ ಗೆಲುವು ಸಾಧಿಸಿದೆ, ಹೈದರಾಬಾದ್ -ಕರ್ನಾಟಕಪ್ರದೇಶ ಬೀದರ್ ನಿಂದ ರಾಹುಲ್ ಗಾಂಧಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು  ಹೇಳಲಾಗುತ್ತಿದೆ.
ಇತ್ತೀಚಿಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ರಾಹುಲ್ ಗಾಂಧಿ ಬೀದರ್ ಲೋಕಸಭೆ ಕ್ಷೇತ್ರದಿಂದ ಸ್ಪರ್ದಿಸುವ ಸಾಧ್ಯತೆ ಇದೆಎಂಬ ಬಗ್ಗೆ ಸುಳಿವು ನೀಡದ್ದಾರೆ. ಅದಕ್ಕಾಗಿಎಲ್ಲಾ ಸಿದ್ಧತೆ ನಡಸಲಾಗುತ್ತಿದೆ ಎಂದು ಎಂಬ ಸುಳಿವು ನೀಡಿದ್ದರು.
ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು, ಕರ್ನಾಟಕದ ಯಾವ ಭಾಗದಿಂದ ಬೇಕಾದರೂ ಸ್ಪರ್ಧಿಸಬಹುದು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ, ಆದರೆ ಈ ಸಂಬಂಧ ಯಾರೂ ನನ್ನ ಜೊತೆ ಚರ್ಚಿಸಿಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ರಾಹುಲ್ ಗಾಂಧಿ ಸ್ಪರ್ಧಿಸಿದರೇ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಫುಲ್ ಸ್ವೀಪ್ ಮಾಡಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ. 
ಸದ್ಯ ಬೀದರ್ ಬಿಜೆಪಿ ಭದ್ರಕೋಟೆ ಎಂಬ ಹೇಳಿಕೆಯನ್ನು ತಳ್ಳಿ ಹಾಕಿದ ಈಶ್ವರ್ ಖಂಡ್ರೆ ಈ ಬಾರಿ ಕಾಂಗ್ರೆಸ್  ಜಯ ಗಳಿಸುವುದು ಶತಃಸಿದ್ಧ ಎಂದು ಹೇಳಿದ್ದಾರೆ. ಒಂದು ವೇಳೆ ರಾಹುಲ್ ಗಾಂಧಿ ಸ್ಪರ್ಧಿಸದಿದ್ದರೇ  ಈಶ್ವರ್ ಖಂಡ್ರೆ ಅವರನ್ನು ಕಣಕ್ಕಿಳಿಸಲು ಪಕ್ಷ ತಯಾರಿ ನಡೆಸುತ್ತಿದೆ.,  
ಕರ್ನಾಟಕದಿಂದ ಸ್ಪರ್ದಿಸುವುದು ನೆಹರು ಗಾಂಧಿ ಕುಟುಂಬಕ್ಕೆ ಹೊಸತಲ್ಲ,   1999 ರಲ್ಲಿ ಸೋನಿಯಾ ಗಾಂಧಿ ಬಳ್ಳ್ರಾರಿಯಿಂದ ಹಾಗೂ 1978 ರಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಇನ್ನೂ ಕೆಲವು ದಿನಗಳಲ್ಲೇ ಸ್ಪಷ್ಟ ಚಿತ್ರಣ ಸಿಗುತ್ತದೆ, 2014 ರಲ್ಲಿ  ಬಿಜೆಪಿಯ ಭಗವಾನ್ ಖೂಬಾ  ಕಾಂಗ್ರೆಸ್ ನ ಧರ್ಮಸಿಂಗ್ ವಿರದ್ಧಸೋತಿದ್ದರು.
SCROLL FOR NEXT