ರಾಜಕೀಯ

ಸ್ಥಾನಕ್ಕಾಗಿ ನಾವು ಬೇಡಿರಲಿಲ್ಲ: ನಿಗಮ-ಮಂಡಳಿ ಪಟ್ಟಿ ತಡೆಹಿಡಿದ್ದಕ್ಕೆ ಸಿಎಂ ವಿರುದ್ಧ 'ಕೈ' ಶಾಸಕರ ಆಕ್ರೋಶ

Shilpa D
ಬೆಂಗಳೂರು: ಕಾಂಗ್ರೆಸ್ ಸೂಚಿಸಿದ್ದ 19 ಶಾಸಕರ ಪೈಕಿ ಐವರ ಹೆಸರು ಕೈಬಿಟ್ಟು 14 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆಯಷ್ಟೇ ಆದೇಶ ಹೊರಡಿಸಿರುವುದು ಕಾಂಗ್ರೆಸ್ ಗೆ ತಲೆನೋವಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಈ ನೇಮಕಾತಿಗಳನ್ನು ಮಾಡಲಾಗಿತ್ತು, ಆದರೆ ನಿಗಮ- ಮಂಡಳಿಯಂದ ತಮ್ಮ ಹೆಸರು ಕೈ ಬಿಟ್ಟಿದ್ದಕ್ಕೆ ಹಲವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ,. ನಿಗಮ ಮಂಡಳಿಗಳ ಪೈಕಿ  ಬಿಡಿಎಗೆ  ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಅವರ ಹೆಸರನ್ನು ಸೂಚಿಸಲಾಗಿತ್ತು. ಆದರೆ, ಈ ಆದೇಶಕ್ಕೆ ಸಿಎಂ ಕುಮಾರಸ್ವಾಮಿ ಸಹಿ ಹಾಕಿಲ್ಲ. ಹೀಗಾಗಿ ಸಿಎಂ ವಿರುದ್ಧ ಸೋಮಶೇಖರ್ ಕೆಂಡಾಮಂಡಲವಾಗಿದ್ದಾರೆ, ನಾವು ಸ್ಥಾನಕ್ಕಾಗಿ ಯಾರನ್ನೂ ಕೇಳಿರಲಿಲ್ಲ. ಆದರೆ ಈಗ ನಮ್ಮ ಹೆಸರನ್ನು ತಡೆಹಿಡಿರುವುದು ನಮಗೆ ಮಾಡಿರುವ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ.
ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಶಾಸಕರ ನೇಮಕದ ಆದೇಶಕ್ಕೆ ಸಹಿ ಹಾಕುವುದಕ್ಕೆ ವಿಳಂಬ ಮಾಡಿದ್ದ ಮುಖ್ಯಮಂತ್ರಿ ಗಳ ವಿರುದ್ಧ ಕಳೆದ 2 ದಿನಗಳ ಹಿಂದಷ್ಟೇ ಎಸ್.ಟಿ.ಸೋಮಶೇಖರ್ ಭೈರತಿ ಬಸವರಾಜು ಸೇರಿದಂತೆ ಕೆಲವು ಶಾಸಕರು ಬೇಸರ ಹೊರಹಾಕಿದ್ದರು. 
ಮುಖ್ಯಮಂತ್ರಿ ನಿಗಮ-ಮಂಡಳಿ ನೇಮಕಾತಿ ತಡೆಹಿಡಿರುವು ವಿಷಯ ನಮ್ಮ್ ಅರಿವಿಗೆ ಬಂದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ಅವರ ಹೆಸರನ್ನ ಕೈಬಿಟ್ಟಿರುವುದು ದೋಸ್ತಿ ಸರ್ಕಾರದ ನಡುವಣ ಹಗ್ಗಜಗ್ಗಾಟಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.
SCROLL FOR NEXT