ರಾಜಕೀಯ

ಜೆಡಿಎಸ್-ಕಾಂಗ್ರೆಸ್ ಸಂಬಂಧ ಡಿವೋರ್ಸ್ ಹಂತಕ್ಕೆ ತಲುಪಿದೆ-ಡಿ ವಿ ಸದಾನಂದ ಗೌಡ

Sumana Upadhyaya

ನೆಲಮಂಗಲ: ಮೈತ್ರಿ ಸರ್ಕಾರದ ಪಕ್ಷಗಳ ಸ್ಥಿತಿ ಡಿವೋರ್ಸ್ ಹಂತಕ್ಕೆ ಬಂದು ನಿಂತಿದೆ. ರಾಜ್ಯದಲ್ಲಿ ರಾಜಕೀಯ ರದ್ದಾಂತ ನಡೆಯುತ್ತಿದೆ. ವಿರೋಧ ಪಕ್ಷವಾಗಿ ನಮಗೆ ಬದಲಾವಣೆ ತರುವ ಜವಾಬ್ದಾರಿಯಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ಬೆಂಗಳೂರು ಸಮೀಪ ನೆಲಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕರು ದೆಹಲಿಗೆ ಹೋಗಿರುವುದು ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ಭಾಗವಹಿಸಲು. ಸದ್ಯದಲ್ಲಿಯೇ ಲೋಕಸಭೆ ಚುನಾವಣೆಯಿರುವುದರಿಂದ ತರಬೇತಿ ಪಡೆಯಲು ಹೋಗಿದ್ದಾರೆ. ಅದು ಬಿಟ್ಟು ರಾಜ್ಯದ ಮೈತ್ರಿ ಸರ್ಕಾರವನ್ನು ಕೆಡವಲು ಅಥವಾ ಶಾಸಕರನ್ನು ಸೆಳೆಯಲು ನಾವು ಪ್ರಯತ್ನಿಸುತ್ತಿಲ್ಲ ಎಂದರು.

ರಾಜ್ಯ ಸರ್ಕಾರದಲ್ಲಿ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಾ ಕಾಲಕಳೆಯುತ್ತಿದ್ದಾರೆ. ಜನಪರ ಕೆಲಸಗಳಾಗುತ್ತಿಲ್ಲ. ಈ ಸರ್ಕಾರ ತಾನಾಗಿಯೇ ಮುರಿದುಬೀಳುತ್ತದೆ.  37 ಸ್ಥಾನ ಪಡೆದ ಜೆಡಿಎಸ್ ನವರು ಅಧಿಕಾರ ಮಾಡುವಾಗ 104 ಸ್ಥಾನ ಬಂದಿರುವ ನಾವು ಅಧಿಕಾರ ಮಾಡಬಾರದೇ ಎಂದು ಪ್ರಶ್ನಿಸಿದರು.

SCROLL FOR NEXT