ರಾಜಕೀಯ

ಆಪರೇಷನ್ ಕಮಲಕ್ಕೆ ನಾವು ಹೆದರಲ್ಲ: ಜಿ ಪರಮೇಶ್ವರ್

Srinivasamurthy VN
ಬೆಂಗಳೂರು: ಅಪರೇಷನ್ ಕಮಲದ ಬಗ್ಗೆ ನಮಗೆ ಯಾವ ಭಯವೂ ಇಲ್ಲ. ಬಿಜೆಪಿ ನಾಯಕರು ಅಪರೇಷನ್ ಕಮಲಕ್ಕೆ ಪ್ರಯತ್ನಿಸಿದ್ದಾರೆ. ನಮ್ಮ ಶಾಸಕರು ಯಾವ ಕಾರಣಕ್ಕೆ ಬೇರೆ ಕಡೆ ಹೋಗಿದ್ದಾರೆ ಅಂತ ಗೊತ್ತಿಲ್ಲ ಎಂದು ಡಿಸಿಎಂ ಜಿ ಪರಮೇಶ್ವರ್ ಹೇಳಿದ್ದಾರೆ.
ನಗರದ ಅಶೋಕ ಹೋಟೆಲ್​ನಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ಇಂದು ಕಾಂಗ್ರೆಸ್​ ನಾಯಕರಿಗೆ ಉಪಹಾರ ಕೂಟ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಕೆ.ಜೆ.ಜಾರ್ಜ್, ಪರಮೇಶ್ವರ್ ನಾಯಕ್, ರಹೀಂಖಾನ್, ಜಯಮಾಲ, ಪುಟ್ಟರಂಗಶೆಟ್ಟಿ, ಪ್ರಿಯಾಂಕ್ ಖರ್ಗೆ, ಶಿವಶಂಕರ್ ರೆಡ್ಡಿ, ಎಂಟಿಬಿ ನಾಗರಾಜ್, ಸಚಿವರಾದ ಡಿ.ಕೆ ಶಿವಕುಮಾರ್, ಇ.ತುಕಾರಾಂ, ಆರ್.ಬಿ ತಿಮ್ಮಾಪುರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, 2019/20 ಬಜೆಟ್​​ನಲ್ಲಿ ಏನೆಲ್ಲ ಅಂಶಗಳನ್ನು ಸೇರಿಸಬೇಕು ಅನ್ನೋದರ ಬಗ್ಗೆ ಚರ್ಚಿಸಿದ್ದೇವು. ಸಿದ್ದರಾಮಯ್ಯ, ಸಚಿವರು, ಕೆಪಿಸಿಸಿ ಅಧ್ಯಕ್ಷರು ಸಲಹೆ, ಸೂಚನೆಗಳನ್ನ ನೀಡಿದ್ದಾರೆ. ಅವರವರ ಇಲಾಖೆಯಲ್ಲಿ ಹೊಸ ಯೋಜನೆಗಳನ್ನ ಹೇಗೆ ಜಾರಿಗೆ ತರಬೇಕು ಅನ್ನೋದರ ಸಿಎಂ ಬಜೆಟ್ ತಯಾರಿ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪೂರ್ವಭಾವಿಯಾಗಿ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ಅಂತೆಯೇ ಆಪರೇಷನ್ ಕಮದ ಬಗ್ಗೆ ಮಾತನಾಡಿದ ಅವರು, ಉಪಾಹಾರ ಕೂಟದಲ್ಲಿ ಅಪರೇಷನ್ ಕಮಲದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೇಳಿದ ಪರಮೇಶ್ವರ ಅವರು, ಅಪರೇಷನ್ ಕಮಲದ ಬಗ್ಗೆ ನಮಗೆ ಭಯವೂ ಇಲ್ಲ. ಬಿಜೆಪಿ ನಾಯಕರು ಅಪರೇಷನ್ ಕಮಲಕ್ಕೆ ಪ್ರಯತ್ನಿಸುತ್ತಿದ್ದಾರೆ. ನಮ್ಮ ಶಾಸಕರು ಯಾವ ಕಾರಣಕ್ಕೆ ಬೇರೆ ಕಡೆ ಹೋಗಿದ್ದಾರೆ ಅಂತ ಗೊತ್ತಿಲ್ಲ. ದೇವಸ್ಥಾನಕ್ಕೋ, ಬೀಚ್​ಗೋ ಹೋಗಿರಬಹುದು. ಯಾರು ಹೋಗಿದ್ದಾರೆ ಅನ್ನೋ ಮಾಹಿತಿ ತರಿಸಿಕೊಳ್ತೀವಿ. ಯಾವುದೇ ಕಾರಣಕ್ಕೂ ಸರ್ಕಾರ ಆಸ್ಥಿರ ಆಗಲ್ಲ. ನಮ್ಮ ಶಾಸಕರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಆದರೆ ಇಂದು ನಡೆದ ಕೂಟದ ನೆಪದಲ್ಲಿ ಕಾಂಗ್ರೆಸ್​ ನಾಯಕರು ಕೂಡ ಆಪರೇಷನ್ ಕಮಲಕ್ಕೆ ಪ್ರತಿತಂತ್ರದ ಕುರಿತು  ಸಭೆ ನಡೆಸಿದ್ದಾರೆ ಎನ್ನಲಾಗಿದೆ.
SCROLL FOR NEXT