ರಾಜಕೀಯ

ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳಲು 2 ವಾರ ಹಿಂದೆಯೇ ಶಾಸಕ ಆರ್ ಶಂಕರ್ ನಿರ್ಧಾರ

Sumana Upadhyaya

ಹಾವೇರಿ: ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ(ಕೆಪಿಜೆಪಿ) ಒಬ್ಬನೇ ಒಬ್ಬ ಶಾಸಕ ರಾಣೆಬೆನ್ನೂರಿನ ಆರ್ ಶಂಕರ್ ಅವರನ್ನು ಸಂಪುಟದಿಂದ ತೆಗೆದುಹಾಕಿದ್ದಕ್ಕೆ ಬೇಸತ್ತು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಾರೆ ಎಂದು ಪಕ್ಷದ ರಾಣೆಬೆನ್ನೂರು ಅಧ್ಯಕ್ಷ ಜಗದೀಶ್ ಯಾಲಿಗರ್ ಹೇಳಿದ್ದಾರೆ.

ತಮ್ಮ ಬೆಂಬಲಿಗರ ಮುಂದೆ ಅತೃಪ್ತಿ ಮತ್ತು ಬೇಸರವನ್ನು ಹೇಳಿಕೊಳ್ಳುತ್ತಿದ್ದ ಶಂಕರ್ ಎರಡು ವಾರಗಳ ಹಿಂದೆಯೇ ಮೈತ್ರಿಕೂಟ ಪಕ್ಷಗಳಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದರು ಎಂದರು.

ನಿನ್ನೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಪತ್ರವನ್ನು ಬರೆದ ಶಾಸಕ ಶಂಕರ್ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ಸು ಪಡೆಯುವುದಾಗಿ ತಿಳಿಸಿದ್ದರು.

ಎರಡು ವಾರಗಳ ಹಿಂದೆ ಪಕ್ಷದ ಸಭೆಯಲ್ಲಿ ಶಾಸಕ ಶಂಕರ್ ಈ ಬಗ್ಗೆ ಚರ್ಚೆ ನಡೆಸಿದ್ದರು. ನಮ್ಮ ಶಾಸಕರು ಮತ್ತು ಕಾರ್ಯಕರ್ತರು ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರದ ನಡೆಯಿಂದ ಬೇಸತ್ತಿದ್ದು ಸರಿಯಾದ ಕಾರಣ ನೀಡದೆ ಅರಣ್ಯ ಸಚಿವ ಹುದ್ದೆಯಿಂದ ತೆಗೆದು ಹಾಕಿದ್ದಕ್ಕೆ ಬೇಸತ್ತಿದ್ದರು ಎಂದು ಯಾಲಿಗರ್ ತಿಳಿಸಿದರು.

ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಏನೂ ಮಾಡಿಲ್ಲ. ಶಂಕರ್ ಅವರಲ್ಲಿ ಕೇಳದೆಯೇ ಸಚಿವ ಸ್ಥಾನದಿಂದ ತೆಗೆದುಹಾಕಿದರು.ಆರಂಭದಲ್ಲಿ ಸರ್ಕಾರ ರಚಿಸುವಾಗ ನೀಡಿದ್ದ ಭರವಸೆಯಂತೆ ನಡೆದುಕೊಳ್ಳಲಿಲ್ಲ, ನಮ್ಮ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಆರೋಪಿಸಿದ ಯಲಿಗಾರ್, ಶಂಕರ್ ಅವರು ಬಿಜೆಪಿ ಸೇರಲಿದ್ದು ಸದ್ಯದಲ್ಲಿಯೇ ನಿರ್ಧಾರ ಕೈಗೊಳ್ಳಲಿದ್ದಾರೆ.
ಶಾಸಕ ಶಂಕರ್ ಸದ್ಯ ದೆಹಲಿಯಲ್ಲಿದ್ದು ಅವರು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದು ಜಗದೀಶ್ ಯಾಲಿಗರ್ ತಿಳಿಸಿದ್ದಾರೆ.

SCROLL FOR NEXT