ಬೆಂಗಳೂರು: ಬಳ್ಳಾರಿ ಜಿಲ್ಲೆಯ ಶಾಸಕರುಗಳಲ್ಲಿ ಎರಡು ಬಣ ಆಗಿದ್ದು, ಗುಂಪುಗಾರಿಕೆ ಶುರುವಾಗಿದೆ, ಇದಕ್ಕೆ ಮುಖ್ಯ ಕಾರಣ ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಂದು ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಕಂಪ್ಲಿ ಶಾಸಕ ಗಣೇಶ್ ಅವರಿಂದ ಪೆಟ್ಟು ತಿಂದು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್ ಅವರನ್ನು ನೋಡಲು ಹೋಗಿದ್ದ ಜನಾರ್ದನ ರೆಡ್ಡಿ ಅವರು ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು,
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಶೀತಲ ಸಮರ ನಡೆಯುತ್ತಿದೆ. ಗಣೇಶ್ ಮತ್ತು ಭೀಮಾನಾಯ್ಕ ಸಿದ್ದರಾಮಯ್ಯ ಅವರ ಗುಂಪು ಬಳ್ಳಾರಿಯ ಉಳಿದ ಕಾಂಗ್ರೆಸ್ ಶಾಸಕರು ಡಿಕೆ.ಶಿವಕುಮಾರ್ ಗುಂಪು. ಜಿಲ್ಲೆಯಲ್ಲಿ ಗುಂಪು ರಾಜಕೀಯ ಪ್ರಾರಂಭವಾಗಿದೆ
ನನ್ನ ಆತ್ಮೀಯ ಗೆಳೆಯನನ್ನು (ಆನಂದ್ ಸಿಂಗ್) ಇಂದು ಆಸ್ಪತ್ರೆಯ ಬೆಡ್ ಮೇಲೆ ನೋಡಿದೆ, ಅವರ ಕಣ್ಣಿಗೆ ತೀವ್ರ ಪೆಟ್ಟಾಗಿದೆ, ಅವರು ನೆಡದಾಡಲು ಇನ್ನೂ ಕೆಲವು ದಿನ ಬೇಕಾಗಬಹುದು, ಗಣೇಶ್ ಒಬ್ಬ ಶಾಸಕನಾಗಿ ಈ ರೀತಿ ಮಾಡಿದ್ದು ಮಹಾ ತಪ್ಪು ಎಂದು ಅವರು ಹೇಳಿದರು.
ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಶಾಸಕ ಗಣೇಶ್‌ನನ್ನು ಬಂಧಿಸಲು ಹಿಂದೇಟು ಹಾಕಲಾಗುತ್ತದೆ. ಕೂಡಲೇ ಪೊಲೀಸರು ಶಾಸಕ ಗಣೇಶ್ ಅವರನ್ನು ಬಂಧಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics