ರಾಜಕೀಯ

ಹೈಕಮಾಂಡ್ ಬಯಸಿದರೆ ಸಂಸದ ಹುದ್ದೆ ತ್ಯಾಗಕ್ಕೂ ಸಿದ್ಧ: ಡಿ.ಕೆ.ಸುರೇಶ್

Shilpa D
ಬೆಂಗಳೂರು: ಪಕ್ಷದ ಗೆಲುವಿಗಾಗಿ ಒಂದು ವೇಳೆ ಸ್ಥಾನ ತ್ಯಾಗ  ಮಾಡಬೇಕು ಎಂದು ಹೈಕಮಾಂಡ್ ಹೇಳಿದರೆ ಅದಕ್ಕೂ ಸಿದ್ಧ ಎಂದು ಬೆಂಗಳೂರು ಗ್ರಾಮಾಂತರ  ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ .
ಬೆಂಗಳೂರಿನಲ್ಲಿ ಮಾತನಾಡಿದ ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಕೋಲಾರ ಲೋಕಸಭಾ  ಕ್ಷೇತ್ರಗಳನ್ನು  ಹೊಸಬರಿಗೆ ಬಿಟ್ಟುಕೊಡಬೇಕು ಎಂಬ ಬಲವಾದ ಕೂಗಿನ ನಡುವೆಯೇ ಈ ನಾಲ್ಕು ಕ್ಷೇತ್ರಗಳ ಮುಖಂಡರ ಜೊತೆ ಸಭೆ ನಡೆಸಿ ಕಾರ್ಯಕರ್ತರ ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಹೇಳಿದರು.
ಹಾಲಿ ಕ್ಷೇತ್ರಗಳ ಸಂಸದರು ಸಕ್ರಿಯರಾಗಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿ ಅಲೆ ವಿರುದ್ಧ ಸೆಣಸಾಡಿ ಪಕ್ಷ ಕಟ್ಟಿದ್ದಾರೆ.  ಹೈಕಮಾಂಡ್ ನಿಂದ ಎಲ್ಲರಿಗೂ ಸೀಟು ಸಿಗುವ ಭರವಸೆ ಇದೆ. ಒಂದು ವೇಳೆ ಹೈಕಮಾಂಡ್ ಹೇಳಿದರೆ ನಾನೇ ಸೀಟು ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಆಪರೇಷನ್ ಕಮಲ ಯಾವ ಹಂತದಲ್ಲಿ‌ ನಡೆಯುತ್ತಿದೆ ಎಂಬುದು ಮಾಧ್ಯಮದವರಿಗೆ ಗೊತ್ತಿದ್ದರೂ ಅದನ್ನು ಸರಿಯಾಗಿ ಬಿಂಬಿಸುತ್ತಿಲ್ಲ. ಆಪರೇಷನ್ ಕಮಲ ನಡೆಯದಿದ್ದರೆ ರೆಸಾರ್ಟ್ ನಲ್ಲಿ  ಗಲಾಟೆ  ನಡೆಯುತ್ತಿರಲಿಲ್ಲ, ಹೀಗಾಗಿ ಆಪರೇಷನ್ ಕಮಲದ ಹಿಂದಿನ ಮೂಲ ಹುಡುಕಬೇಕು ಎಂದರು.
SCROLL FOR NEXT