ರಾಜಕೀಯ

ಕಾಂಗ್ರೆಸ್‌ ಗಿಂತ ಬಿಜೆಪಿ ಜತೆಗಿನ ಮೈತ್ರಿ ಸರ್ಕಾರವೇ ಚೆನ್ನಾಗಿತ್ತು: ಸಚಿವ ಪುಟ್ಟರಾಜು

Lingaraj Badiger
ಮಂಡ್ಯ: ಕಾಂಗ್ರೆಸ್ - ಜೆಡಿಎಸ್ ದೋಸ್ತಿಗಳ ಕಿತ್ತಾಟ ಜೋರಾಗಿದ್ದು, ಕಾಂಗ್ರೆಸ್ ತನ್ನ ಶಾಸಕರನ್ನ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಗುವ ಯಾವುದೇ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎಂದು ಸಚಿವ ಸಿ.ಎಸ್. ಪುಟ್ಟರಾಜು ಅವರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಜೊತೆಗಿನ ಮೈತ್ರಿಗಿಂತ ಬಿಜೆಪಿ ಜತೆಗಿನ ಮೈತ್ರಿ ಸರ್ಕಾರವೇ ಚೆನ್ನಾಗಿತ್ತು ಎಂದು ಹೇಳಿದ್ದಾರೆ.
ಕೆಲವು ಕಾಂಗ್ರೆಸ್ ಶಾಸಕರು ಹದ್ದು ಮೀರಿ ನಡೆದುಕೊಳ್ಳುತ್ತಿರುವುದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರದಲ್ಲಿ ರಾಜೀನಾಮೆ ನೀಡಲು ಸಿದ್ದ ಎಂದಿದ್ದಾರೆ. ಕುಮಾರಸ್ವಾಮಿ ಅವರು ರಾಜೀನಾಮೆ ಮಾತನಾಡಬೇಕೆಂದರೆ ಅವರಿಗೆ ಎಷ್ಟು ನೋವಾಗಿರಬೇಕು ಅಲ್ಲವೇ ಎಂದು ಪ್ರಶ್ನಿಸಿದರು. 
ಕಾಂಗ್ರೆಸ್ ಜತೆಗಿನ ಈಗಿನ ಮೈತ್ರಿಯ ಪರಿಸ್ಥಿತಿಯನ್ನು ನೋಡಿದರೆ ಹತ್ತು ವರ್ಷಗಳ ಹಿಂದಿನ ಬಿಜೆಪಿ ಜತೆಗಿನ ಮೈತ್ರಿಯೇ ಚೆನ್ನಾಗಿತ್ತು ಅನಿಸುತ್ತಿದೆ. ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್ಸಿಗರು ತಕರಾರು ಮಾಡುತ್ತಿದ್ದಾರೆ. ಆದರೂ ನಾವು (ಜೆಡಿಎಸ್) ಮೈತ್ರಿ ಧರ್ಮವನ್ನು ಪಾಲಿಸುತ್ತಿದ್ದೇವೆ, ಮುಂದೆಯೂ ಪಾಲಿಸುತ್ತೇವೆ ಎಂದರು. 
ಕಾಂಗ್ರೆಸ್ ಬಿಟ್ಟು ಬಿಜೆಪಿಯೊಂದಿಗೆ ಹೋಗುವ ಪ್ರಶ್ನೆಯೇ ಇಲ್ಲ. ಹಿಂದೆ ಬಿಜೆಪಿಯೊಂದಿಗೆ ನಾವು ಸರಕಾರ ನಡೆಸಿದ್ದೆವು. ಆಗಿನ ನಮ್ಮ ಆಡಳಿತವನ್ನ ಇಡೀ ರಾಜ್ಯ ಮೆಚ್ಚಿತ್ತು. ಕೃಷ್ಣದೇವರಾಯರ ಕಾಲ ಮರುಕಳಿಸಿದೆ ಅನ್ನೋ ರೀತಿಯಲ್ಲಿ ಆಡಳಿತವಿತ್ತು. ಆದರೆ, ಕಾಂಗ್ರೆಸ್ ಶಾಸಕರು ದಿನಾ ಬೆಳಗಾದರೆ ಬೀದೀಲಿ ಮಾತನಾಡುತ್ತಾ ನಿಲ್ಲುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
SCROLL FOR NEXT