ರಾಜಕೀಯ

ಆಪರೇಷನ್ ಕಮಲ 2.0 : ಸಮ್ಮಿಶ್ರ ಸರ್ಕಾರ ಪತನದ ಹಿಂದೆ ಕೇಂದ್ರ ಸಚಿವರ ಕೈವಾಡ- ಮೂಲಗಳು

Nagaraja AB
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಪತನಗೊಳಿಸುವ ಹಿಂದೆ ಕೇಂದ್ರದ ಹಾಲಿ ಸಚಿವರೊಬ್ಬರ ಕೈವಾಡವಿದೆ ಎಂಬಂತಹ ಮಾಹಿತಿ ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಆ ಸಚಿವರು ರಾಜಕೀಯ ಬೆಳವಣಿಗೆಯ ಇಂಚಿಂಚು ಮಾಹಿತಿಯನ್ನು ಪಡೆಯುತ್ತಿದ್ದು, ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಇಬ್ಬರು ನಿಷ್ಠಾವಂತ ಮುಖಂಡರು ಯುಬಿ ಸಿಟಿ ಹೋಟೆಲ್ ನಲ್ಲಿ ಅತೃಪ್ತ ಶಾಸಕರೊಂದಿಗೆ ಸಭೆಯನ್ನು ಆಯೋಜಿಸಿದ್ದಾರೆ. ನಂತರ ಪ್ರತ್ಯೇಕವಾಗಿ ಉಭಯ ಪಕ್ಷಗಳ ಶಾಸಕರು ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನು ಮುಂಚಿತವಾಗಿಯೇ ಯೋಚಿಸಲಾಗಿದ್ದು, ಸಮಯವನ್ನು ಕೂಡಾ ಮುಂಚಿತವಾಗಿಯೇ ನಿಗದಿಪಡಿಸಲಾಗಿದೆ ಎಂದು ಮತ್ತೊಂದು ಮೂಲದಿಂದ ತಿಳಿದುಬಂದಿದೆ.
ಪೋನ್ ಕದ್ದಾಲಿಕೆಯ ಭೀತಿ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಡಮ್ಮಿ ನಂಬರ್ ಗಳನ್ನು ಬಳಸಿಕೊಳ್ಳಲಾಗಿದ್ದು, ಕೋಡ್ ವರ್ಲ್ಡ್ಸ್ ಮೂಲಕ ಸಂಭಾಷಣೆ ನಡೆಸಲಾಗಿದೆ ಎನ್ನಲಾಗಿದೆ. 
 ರಾಜೀನಾಮೆ ನೀಡಿದ ಶಾಸಕರು ವಿಮಾನ ನಿಲ್ದಾಣದವರೆಗೂ ಬಸ್ ನಲ್ಲಿ ತೆರಳಿದ್ದು, ಮುಂಬೈಗೆ ಪ್ರಯಾಣಿಸಿದ್ದಾರೆ. ಮುಂಗಾರು ಅಧಿವೇಶನಕ್ಕೆ ಕೆಲ ದಿನಗಳು ಬಾಕಿ ಇರುವಂತೆಯೇ ನಡೆದಿರುವ ಈ ಆಪರೇಷನ್ ಕಮಲದಿಂದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್  ಸಮ್ಮಿಶ್ರ ಸರ್ಕಾರ ಪತನಕ್ಕೆ ಕೌಂಟ್ ಡೌನ್ ಶುರುವಾಗಿದೆ.
SCROLL FOR NEXT