ರಾಜಕೀಯ

ತೊಘಲಕ್ ನಂತರ ಭಾರತವನ್ನು ಆಳುತ್ತಿರುವ ಅದೇ ಗುಣಗಳುಳ್ಳ ವ್ಯಕ್ತಿ ನರೇಂದ್ರ ಮೋದಿ: ಕಾಂಗ್ರೆಸ್ ಟೀಕೆ

Sumana Upadhyaya
ಬೆಂಗಳೂರು: ತೊಘಲಕ್ ಸಂತತಿಯ ಪ್ರಸಿದ್ಧ ಸುಲ್ತಾನ ಮುಹಮ್ಮದ್ ಬಿನ್ ತುಘಲಕ್. ಆತನು ಒಳ್ಳೆಯ, ಕೆಟ್ಟ, ನೀಚ , ಬುದ್ಧಿವಂತ ಹಾಗೂ ಹುಚ್ಚು ಗುಣಗಳೆಲ್ಲವನ್ನೂ ಒಳಗೊಂಡ ಪ್ರಸಿದ್ದ ದೆಹಲಿಯ ಸುಲ್ತಾನನಾಗಿದ್ದನು. ಅಂತಹ ರಾಜನಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ರಾಜ್ಯ ಕಾಂಗ್ರೆಸ್ ಹೋಲಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್​ನಲ್ಲಿ ವಾಗ್ದಾಳಿ ನಡೆಸಿರುವ ಕೆಪಿಸಿಸಿ, ನೈತಿಕತೆ, ಮೌಲ್ಯಹೀನ ರಾಜಕಾರಣಿ ಮೋದಿ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಇಟ್ಟರು. 10 ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿದ್ದಾರೆ. ಕರ್ನಾಟಕ ರಾಜ್ಯ ಮೋದಿ ಸಂಚಿಗೆ ಬಲಿಯಾಗಬಾರದು ಎಂದು ಟ್ವೀಟ್ ಮಾಡಿದೆ.
ರಾಜ್ಯದಲ್ಲಿ ನಿನ್ನೆ ಮತ್ತೆ ನಡೆದಿರುವ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ 11 ಶಾಸಕರು ರಾಜೀನಾಮೆ ನೀಡಿದ್ದು ಮೈತ್ರಿ ಸರ್ಕಾರದ ಉಳಿವಿನ ಬಗ್ಗೆ ಆತಂಕ ಶುರುವಾಗಿದೆ. ಶಾಸಕರ ರಾಜೀನಾಮೆ ಹಿಂದೆ ಕೇಂದ್ರದ ಬಿಜೆಪಿ ನಾಯಕರುಗಳಾದ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕೈವಾಡವಿದೆ ಎಂಬುದು ರಾಜ್ಯ ಕಾಂಗ್ರೆಸ್ ನಾಯಕರ ವಾದವಾಗಿದೆ. 
ಈ ಮಧ್ಯೆ ತಮ್ಮ ರಾಜೀನಾಮೆ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 
SCROLL FOR NEXT