ರಾಮಲಿಂಗಾ ರೆಡ್ಡಿ 
ರಾಜಕೀಯ

ಅಪ್ಪ-ಮಗಳ ಮನವೊಲಿಸಲು ಮುಖಂಡರ ಕಸರತ್ತು: ಸಚಿವ ಸ್ಥಾನ ನೀಡುವುದಾಗಿ ಸೌಮ್ಯಾರೆಡ್ಡಿಗೆ ಕಾಂಗ್ರೆಸ್ ಗಾಳ?

ಜುಲೈ 12 ರಂದು ಭಾರೀ ಪ್ರಮಾಣದಲ್ಲಿ ರಾಜಕೀಯ ಬದಲಾವಣೆಗಳಾಗಲಿವೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯಪಾಲ ವಜೂಬಾಯಿ ವಾಲಾ ...

ಬೆಂಗಳೂರು: ಜುಲೈ 12 ರಂದು ಭಾರೀ ಪ್ರಮಾಣದಲ್ಲಿ ರಾಜಕೀಯ ಬದಲಾವಣೆಗಳಾಗಲಿವೆ ಎಂದು ನಿರೀಕ್ಷಿಸಲಾಗಿದೆ.  ರಾಜ್ಯಪಾಲ ವಜೂಬಾಯಿ ವಾಲಾ  ಅಧಿವೇಶನ ಆರಂಭಕ್ಕೂ ಮುನ್ನ ಮೈತ್ರಿ ಸರ್ಕಾರದ ಬಹುಮತ ಸಾಬೀತು ಪಡಿಸುವಂತೆ ಸೂಚಿಸಬಹುದು ಎಂದು ಬಿಜೆಪಿ ಭರವಸೆ ಇಟ್ಟುಕೊಂಡಿದೆ.
ಈಗಾಗಲೇ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮನವೊಲಿಕೆ ಕಸರತ್ತು ಆರಂಭವಾಗಿತ್ತು,ರಾಮಲಿಂಗಾ ರೆಡ್ಡಿ ಪುತ್ರಿಗೆ ಪ್ರಬಲ ಖಾತೆ ನೀಡುವ ಆಮೀಷ ವೊಡ್ಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ರಾಜ್ಯದಲ್ಲಿ ಉಂಟಾಗುತ್ತಿರುವ ಎಲ್ಲಾ ರಾಜಕಯ ಬೆಳವಣಿಗೆಗಳನ್ನು ಕೇಂದ್ರದ ಇಬ್ಬರು ಬಿಜೆಪಿ ನಾಯಕರು ಕಣ್ಣಲ್ಲಿ ಕಣ್ಣಟ್ಟು ಗಮನಿಸುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಜುಲೈ 4 ರಂದು ನಾಲ್ಕೈದು ಬಿಜೆಪಿ ಮುಖಂಡರ ಜೊತೆ ಬಿಜೆಪಿ ರಾಷ್ಚ್ರೀಯ ಕಾರ್ಯದರ್ಶಿ ಮುರುಳೀಧರ ರಾವ್  ರಾಮಲಿಂಗಾ ರೆಡ್ಜಿ ನಿವಾಸಕ್ಕೆ ತೆರಳಿದ್ದರು. ಇಂಜಿನೀಯರ್ ಕೃಷ್ಣರಾಜು ಈ ಭೇಟಿ ಆಯೋಜಿಸಿದ್ದರು ಎಂದು ಹೇಳಲಾಗಿದೆ,.
ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ನಾವು ಪ್ಲಾನ್ ಮಾಡುತ್ತಿದೆ.ಸರ್ಕಾರ ತಾನಾಗೆ ಬಿದ್ದರೇ ಮಾತ್ರ ಸರ್ಕಾರ ರಚಿಸಲು ಹಕ್ಕು ಮಂಡಿಸಲು ಬಿಜೆಪಿ ನಿರ್ಧರಿಸಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.
ಬಿಜೆಪಿ ಸರ್ಕಾರ ಬೀಳಿಸಿತು ಎಂಬ ಅಪವಾದ ಹೊತ್ತಿಕೊಳ್ಳಬಾರದೆಂದು ಕೇಂದ್ರ ಬಿಜೆಪಿ ನಾಯಕರು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಯಾರೋಬ್ಬರು ರಿಸ್ಕ್ ತೆಗೆದು ಕೊಳ್ಳಲು ಮುಂದಾಗುತ್ತಿಲ್ಲ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ರಾಷ್ಟ್ಪಪತಿ ಆಳ್ವಿಕೆ ಹೇರಲಾಗುತ್ತದೆಯೇ ಎಂಬುದನ್ನು ಬಿಜೆಪಿ ಕಾದು ನೋಡುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ