ರಾಜಕೀಯ

ಸ್ಪೀಕರ್‌ಗೆ ಟಕ್ಕರ್: ಸುಪ್ರೀಂಕೋರ್ಟ್ ಗೆ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು!

Vishwanath S
ನವದೆಹಲಿ: ನಮ್ಮ ರಾಜಿನಾಮೆಯನ್ನು ಅಂಗೀಕರಿಸಲು ಬೇಕು ಅಂತಲೆ ವಿಳಂಬ ಮಾಡಲಾಗುತ್ತಿದೆ ಎಂದು ಮುಂಬೈನಲ್ಲಿರುವ ಅತೃಪ್ತ ಶಾಸಕರು ಸ್ಪೀಕರ್ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಸುಪ್ರೀಂಕೋರ್ಟ್ ಸಿಜೆ ಪೀಠದ ಮುಂದೆ ನಾಳೆ ವಿಚಾರಣೆ ನಡೆಯಲಿದೆ. 
ಅತೃಪ್ತರ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅರ್ಜಿ ಸಲ್ಲಿಸಿದ್ದು ಸಿಜೆ ಪೀಠದ ಮುಂದೆ ವಾದ ಮಂಡಿಸಲಿದ್ದಾರೆ. 
ನಿನ್ನೆ ಅತೃಪ್ತ ಶಾಸಕರ ರಾಜಿನಾಮೆ ಪತ್ರವನ್ನು ಪರಿಶೀಲನೆ ನಡೆಸಿದ ರಮೇಶ್ ಕುಮಾರ್ ಅವರು 5 ರಾಜಿನಾಮೆ ಪತ್ರ ಸರಿಯಾಗಿದೆ. ಇನ್ನು 8 ಅಪೃಪ್ತ ಶಾಸಕರ ರಾಜಿನಾಮೆ ಕ್ರಮಬದ್ಧವಾಗಿಲ್ಲ ಎಂದು ಹೇಳಿದ್ದರು. 
SCROLL FOR NEXT