ರಾಜಕೀಯ

'ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕು'

Shilpa D
ಬೆಂಗಳೂರು:  ರಾಜಿನಾಮೆ ನೀಡಿರುವ 8 ಶಾಸಕರಿಂಜ ವಿವರಣೆ ಪಡೆಯಲು ಸ್ಪೀಕರ್ ರಮೇಶ್ ಕುಮಾರ್ ಸಮಯ ನೀಡಿದ್ದಾರೆ, ಹೀಗಾಗಿ ರೆಬೆಲ್ ಶಾಸಕರ ರಾಜಿನಾಮೆ ಅಂಗೀಕಾರವಾಗುವುದು ನಿಧಾನವಾಗಿದೆ.
ಆದರೆ ಸ್ಪೀಕರ್ ರಾಜಿನಾಮೆ ಅಂಗೀಕಾರ ಮಾಡದಿರುವುದರ ಹಿಂದಿನ ಉದ್ದೇಶ ಏನು ಎಂಬುದು ತಿಳಿಯುತ್ತಿಲ್ಲ ಎಂದು ಜೆಡಿಎಸ್ ಮುಖಂಡ ಎಚ್. ವಿಶ್ವನಾಥ್ ಆಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಸ್ಪೀಕರ್ ತಮ್ಮ ರಾಜಿನಾಮೆಯನ್ನು ಅಂಗೀಕರಿಸಿದೇ ಸತಾಯಿಸುತ್ತಿದ್ದಾರೆ, ಹೀಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ್ದಾರೆ. ಸ್ಪೀಕರ್ ಮೇಲೆ ನಮಗೆ ತುಂಬಾ ವಿಶ್ವಾಸವಿತ್ತು, ಸಮ್ಮಿಶ್ರ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಅವರಿಗೆ ಅರಿವಿದೆ, ಅವರು ನಿಯಮಗಳ ಪ್ರಕಾರ ಹೋಗುತ್ತಿದ್ದಾರೆ, ನಾವು ಸ್ವಯಂ ಪ್ರೇರಿತರಾಗಿ ರಾಜಿನಾಮೆ ನೀಡಿದ್ದೇವೋ ಅಥವಾ ಒತ್ತಡದಲ್ಲಿ ರಾಜಿನಾಮೆ ನೀಡಿದ್ದೇವೋ ಎಂಬ ಬಗ್ಗೆ ಸ್ಪಷ್ಟನೆ ಪಡೆಯಲು ಸ್ಪೀಕರ್ ನಿರ್ಧರಿಸಿದ್ದಾರೆ.
ಸ್ಪೀಕರ್ ಅವರು ದೂರು ತೆಗೆದುಕೊಳ್ಳಲು ಯಾವುದೇ ಅಧಿಕಾರವಿಲ್ಲ, ರಾಜಕೀಯ ನಾಯಕರುಗಳು ಇದರಲ್ಲಿ ಪಾಲ್ಗೋಳ್ಳಲು ಸಾಧ್ಯವಿಲ್ಲ, ಸಮ್ಮಿಶ್ರ ಸರ್ಕಾರ ಎಲ್ಲಾ ರೀತಿಯಿಂದಲೂ ವೈಫಲ್ಯವಾಗಿದೆ ಎಂದು ವಿಶ್ವನಾಥ್ ಆರೋಪಿಸಿದ್ದಾರೆ.
ತಮ್ಮ ರಾಜಕೀಯ ಮರುಹುಟ್ಟಿಗೆ ಕಾರಣರಾದ ಮಾಜಿ ಪ್ರಧಾನಿ ಎಚ್.,ಡಿ ದೇವೇಗೌಡರಿಗೆ ಧನ್ಯವಾದ ಅರ್ಪಿಸಿದ ವಿಶ್ವನಾಥ್, ದೇವೇಗೌಡ ರ ಜೊತೆ ನನಗೆ ಯಾವುದೇ ಬೇಸರವಿಲ್ಲ, ಆದರೆ ಸಮಸ್ಯೆ ಇರುವುದು ಅವರ ಕುಟುಂಬಸ್ಥರದ್ದು, ಸಚಿವ ರೇವಣ್ಣ ಎಲ್ಲಾ ಇಲಾಖೆಗಳ ಮೇಲೂ ತಮ್ಮ ಪ್ರಾಬಲ್ಯ ತೋರುತ್ತಾರೆ,  ಇಷ್ಟು ದಿನ ಸಾಕಾಗಿದೆ, ಸದ್ಯ ರೆಬೆಲ್ ಶಾಸಕರು ಕುಮಾರಸ್ವಾಮಿ ಅಥವಾ ದೇವೇಗಾಡರ ಮಾತು ಕೇಳುವ ಸ್ಥಿತಿಯಲ್ಲಿಲ್ಲ. 
ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿಗೆ ಸಿಎಂ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚಿಸಬೇಕು ಎಂದು ಸಲಹೆ ನೀಡಿರುವ ವಿಶ್ವನಾಥ್, ರಾಜಕೀಯವಾಗಿ ಶ್ರೀಮಂತ ಚರಿತ್ರೆ ಹೊಂದಿರುವ ಕರ್ನಾಟಕ ಘನತೆಗೆ ಧಕ್ಕೆ ತರಬಾರದು ಎಂದು ಹೇಳಿದ್ದಾರೆ..
ಕರ್ನಾಟಕದಲ್ಲಿ ಕುಟುಂಬ ಕೇಂದ್ರಿತ ರಾಜಕಾರಣ ಅಂತ್ಯಗೊಳ್ಳಬೇಕು, ಅಭಿವೃದ್ಧಿಗಾಗಿ ಶ್ರಮಿಸುವ ಸಮರ್ಥ ಸರ್ಕಾರ ರಚನೆಯಾಗಬೇಕು ಎಂದು ಹೇಳಿದ್ದಾರೆ.
SCROLL FOR NEXT