ಎಂಟಿಬಿ ನಾಗರಾಜ್ 
ರಾಜಕೀಯ

ಮುಂಬೈಗೆ ಹಾರಿದ ಎಂಟಿಬಿ ನಾಗರಾಜ್ :ಮುಖ್ಯಮಂತ್ರಿಗೆ ಮತ್ತೆ'ಟೆನ್ಷನ್'ಶುರು

ಸಿದ್ದರಾಮಯ್ಯ ಆಪ್ತ ಶಾಸಕ ಎಂಟಿಬಿ ನಾಗರಾಜ್ ಮನವೊಲಿಸಲು ನಿನ್ನೆ ಇಡೀ ದಿನ ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದರು. ಆದರೆ, ಇಂದು ಬೆಳಗ್ಗೆ ಎಂಟಿಬಿ ನಾಗರಾಜ್ ಕೂಡಾ ಮುಂಬೈನತ್ತ ಹಾರಿದ್ದಾರೆ.

ಬೆಂಗಳೂರು: ಸಿದ್ದರಾಮಯ್ಯ ಆಪ್ತ ಶಾಸಕ ಎಂಟಿಬಿ ನಾಗರಾಜ್  ಮನವೊಲಿಸಲು ನಿನ್ನೆ ಇಡೀ ದಿನ ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದರು. ಆದರೆ, ಇಂದು ಬೆಳಗ್ಗೆ ಎಂಟಿಬಿ ನಾಗರಾಜ್ ಕೂಡಾ ಮುಂಬೈನತ್ತ ಹಾರಿದ್ದಾರೆ. 
 ಬೆಳಗ್ಗೆ 10-30ರಲ್ಲಿ ಹೆಚ್ ಎಎಲ್ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ ಮುಂಬೈಗೆ ಹಾರಿದ್ದಾರೆ.  ಬಿಜೆಪಿ ಹಿರಿಯ ಮುಖಂಡ ಆರ್ ಅಶೋಕ್ ಕೂಡಾ, ಎಂಟಿಬಿ ನಾಗರಾಜ್ ಜೊತೆಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಮತ್ತೋರ್ವ ಅತೃಪ್ತ ಶಾಸಕ ಮುನಿರತ್ನ ಕೂಡಾ ನಿನ್ನೆ ಮಧ್ಯರಾತ್ರಿಯೇ ಮುಂಬೈ ತಲುಪಿದ್ದಾರೆ. ಸದ್ಯ ದೆಹಲಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಕೂಡಾ ಇಂದು ಮುಂಬೈಗೆ ಪ್ರಯಾಣಿಸಲಿದ್ದು, ಅತೃಪ್ತರ ಗುಂಪು ಸೇರಲಿದ್ದಾರೆ . ಇದರಿಂದಾಗಿ ಅತೃಪ್ತರ ಸಂಖ್ಯೆ 10ರಿಂದ 13ಕ್ಕೆ ಏರಿಕೆಯಾಗಿದ್ದು, ಈ ಗುಂಪಿನಲ್ಲಿ ಹೊಸ ಹುರುಪು ಬಂದಂತಾಗಿದೆ. 
ಈ ಬೆಳವಣಿಗೆಗಳಿಂದ ಕಂಗಲಾಗಿರುವ ಮುಖ್ಯಮಂತ್ರಿಗೆ  ಮತ್ತೆ'ಟೆನ್ಷನ್' ಶುರುವಾಗಿದೆ. ವಿಶ್ವಾಸಮತಯಾಚನೆಗೆ ಧಕ್ಕೆ ಎದುರಾಗುವ ಸಾಧ್ಯತೆ ಹೆಚ್ಚಾಗಿದ್ದು, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಈ ಮಧ್ಯೆ  ಸರ್ಕಾರದ ಈ ಸ್ಥಿತಿಗೆ ಹೆಚ್ ಡಿ ರೇವಣ್ಣ ಅವರೇ ಕಾರಣ ಎಂದು  ಬಹುತೇಕ ಅತೃಪ್ತ ಶಾಸಕರು ಆರೋಪಿಸಿದ್ದಾರೆ. ಎಲ್ಲಾ ಇಲಾಖೆಗಳಲ್ಲೂ ಹಸ್ತಕ್ಷೇಪದಿಂದಾಗಿ ರಾಜೀನಾಮೆ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ