ಬೆಂಗಳೂರು: ನನ್ನ ರಾಜಿನಾಮೆ ಅಂಗೀಕಾರವಾಗಿಲ್ಲ, ಹೀಗಾಗಿ ನಾನು ಸದನಕ್ಕೆ ಹಾಜರಾಗುತ್ತೇನೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಮನೆಗೆ ದೊಡ್ಡವರು ಬಂದಿದ್ದರು, ಅವರು ಬಾರಬಾರದು ಇತ್ತು. ಅವರು ಕರೆದಿದ್ದರೇ ನಾನು ಹೋಗ್ತಾ ಇದ್ದೆ. ಪಕ್ಷ ಬಿಡಬೇಡಿ ಅಂತ ಹೇಳಿದ್ದಾರೆ. ಸ್ಪೀಕರ್ ಇಂದು 4:30ಕ್ಕೆ ಕರೆದಿದ್ದಾರೆ. ಸಂಜೆ ಹೋಗುತ್ತೇನೆ ರಾಜೀನಾಮೆ ಸ್ವೀಕಾರ ಆಗುವವರೆಗೆ ನಾನು ಶಾಸಕನೇ ಎಂದು ಹೇಳಿದ್ದಾರೆ.
ವಿಶ್ವಾಸ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಾಮಲಿಂಗಾರೆಡ್ಡಿ, ಎಲ್ಲಾ ವಿಚಾರಗಳನ್ನು ಮಾಧ್ಯಮದ ಮುಂದೆ ಹೇಳೋದಕ್ಕೆ ಆಗುವುದಿಲ್ಲ. ಆರಂಭದಲ್ಲಿ ಕೋಪ ಜಾಸ್ತಿ ಇತ್ತು. ಇದೀಗ ಕಡಿಮೆ ಆಗಿದೆ.
ಅಸಮಾಧಾನ ಕೂಡ ಕಡಿಮೆ ಆಗಿದೆ. ಎಲ್ಲಾರಿಗೂ ಅಷ್ಟೇ ಆರಂಭದಲ್ಲಿ ಅಸಮಾಧಾನ ಕಡಿಮೆ ಇರುತ್ತೆ ,ಆಮೇಲೆ ಕಡಿಮೆ ಆಗುತ್ತೆ. ನಾಲ್ಕು ಗೋಡೆಗಳ ಮಧ್ಯೆ ಮಾತನಾಡಿದ ವಿಷಯವನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics