ಎಚ್.ಡಿ ರೇವಣ್ಣ 
ರಾಜಕೀಯ

'ಅತೃಪ್ತರು ವಾಪಸ್ ಬಂದು ಸರ್ಕಾರ ಉಳಿಸಿದರೇ ಎಚ್.ಡಿ ರೇವಣ್ಣ ರಾಜಿನಾಮೆ ಕೊಡಿಸುವೆ'

ಅತೃಪ್ತ ಶಾಸಕರು ವಾಪಸ್ ಬಂದು ಮೈತ್ರಿ ಸರ್ಕಾರ ಉಳಿಸುವುದಾದರೇ ಸಚಿವ ಎಚ್.ಡಿ ರೇವಣ್ಣ ಅವರಿಂದ ರಾಜಿನಾಮೆ ಕೊಡುವಂತೆ ಮನವೊಲಿಸುವುದಾಗಿ ಜೆಡಿಎಸ್ ...

ಹಾಸನ: ಅತೃಪ್ತ ಶಾಸಕರು ವಾಪಸ್ ಬಂದು ಮೈತ್ರಿ ಸರ್ಕಾರ ಉಳಿಸುವುದಾದರೇ ಸಚಿವ ಎಚ್.ಡಿ ರೇವಣ್ಣ ಅವರಿಂದ ರಾಜಿನಾಮೆ ಕೊಡುವಂತೆ ಮನವೊಲಿಸುವುದಾಗಿ ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ  ಹೇಳಿದ್ದಾರೆ. 
ಸೋಮವಾರ ಹೊಳೆನರಸಿಪುರದಲ್ಲಿ ಮಾತನಾಡಿದ ರಾಮಸ್ವಾಮಿ. ರಾಜ್ಯ ರಾಜಕಾರಣದ ಈ ಸ್ಥಿತಿಗೆ ಎಚ್‌.ಡಿ. ರೇವಣ್ಣ ಅವರೇ ಕಾರಣರಾಗಿದ್ದು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ನಾವೆಲ್ಲಾ ವಾಪಸ್‌ ಬರುತ್ತೇವೆ ಎಂದು ಅತೃಪ್ತ ಶಾಸಕರು ಒಂದು ಹೇಳಿಕೆ ನೀಡಲಿ. ನಾನೇ ಖುದ್ದಾಗಿ ಸಚಿವ ರೇವಣ್ಣ ಅವರ ರಾಜೀನಾಮೆಗೆ ಮನವೊಲಿಸುತ್ತೇನೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ನ್ಯೂನತೆಗಳು ಮತ್ತು ಸಣ್ಣಪುಟ್ಟ ಅಸಮಾಧಾನಗಳು ಇಲ್ಲವೆಂದಲ್ಲ. ಆದರೆ ರಾಜಕೀಯ ವರಿಷ್ಠರ ಜೊತೆಗಿರುವ ಹೊಗಳುಭಟ್ಟ ಶಾಸಕರಿಂದಲೇ ಇಂದು ರಾಜ್ಯ ರಾಜಕಾರಣ ಈ ಸ್ಥಿತಿಗೆ ಬಂದಿದೆ ಎಂದು ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್