ರಾಜಕೀಯ

ಅನರ್ಹತೆ ಅಸ್ತ್ರಕ್ಕೆ ಬಲಿಯಾಗಬೇಡಿ; ನಿಮ್ಮ ಕುಟುಂಬ, ವೋಟು ಹಾಕಿದವರ ಮುಖ ನೋಡಿ: ಅತೃಪ್ತರಿಗೆ ಡಿಕೆಶಿ ಮನವಿ

Shilpa D
ಬೆಂಗಳೂರು: ನಾನು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಅದನ್ನು ನಾನು ಸಚಿವ ಅಲ್ಲ ಓರ್ವ ಶಾಸಕನಾಗಿ ಗೌರವಿಸುತ್ತೇನೆ. ನ್ಯಾಯಾಲಯ ಸ್ಪೀಕರ್ ಅಧಿಕಾರ ಏನು ಅನ್ನೋದನ್ನ ಎತ್ತಿ ಹಿಡಿದಿದೆ ಎಂದು ಜಲ ಸಂಪಲ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ,
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಸಕರು ಕಲಾಪಕ್ಕೆ ಹೋಗಬಹುದು ಬಿಡಬಹುದು. ಆದರೆ, ಪಕ್ಷದ ಕೈಯಲ್ಲಿ ವಿಪ್ ಇದೆಯಲ್ಲ. ಅನರ್ಹತೆಯೇ ಬೇರೆಯ ಕಾನೂನಾಗಿದ್ದು, ನಾನು ನನ್ನ ಶಾಸಕರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು. ಅವರನ್ನು ನಾನು ರೆಬೆಲ್ ಶಾಸಕರು ಎಂದು ಒಪ್ಪಿಕೊಳ್ಳುವುದಿಲ್ಲ, ಅವರು ನನ್ನ ಸ್ನೇಹಿತರು ಎಂದು ಹೇಳಿದ್ದಾರೆ.
ಬೇರೆಯವರ ನಂಬಿ ಹೋಗಬೇಡಿ. ನಿಮ್ಮ ಮೇಲೆ ಮಂಗನ ಟೋಪಿ ಹಾಕುತ್ತಾರೆ. ಅನರ್ಹತೆ ಅನ್ನೋದು ಒಂದು ಇದೆ ಅಲ್ವಾ. ಅನರ್ಹ ಆದರೆ ನೀವು ಮತ್ತೆ ಮಂತ್ರಿ ಆಗಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮನ್ನು ಗೆಲ್ಲಿಸಿರುವ ಜನರ ಮುಖ, ನಿಮ್ಮ ಕುಟುಂಬದವರ ಮುಖ ನೋಡಿ ನೀವು ಅನರ್ಹತೆಯ ಅಸ್ತ್ರಕ್ಕೆ ಬಲಿಯಾಗಬೇಡಿ. ವಿಶ್ವಾಸ ಮತದ ಬಗ್ಗೆ ನಾಳೆ ಮಾತನಾಡೋಣ ಎಂದು ಶಾಸಕ ಮಿತ್ರರಲ್ಲಿ ಮನವಿ ಮಾಡುವ ಮೂಲಕ ಡಿಕೆಶಿ ಅವರು ಪರೋಕ್ಷವಾಗಿ ಅನಹರ್ತೆಯ ಭಯ ಹುಟ್ಟಿಸಿದ್ದಾರೆ.
SCROLL FOR NEXT