ರಾಜಕೀಯ

ವಿಶ್ವಾಸ ಮತಯಾಚನೆಗೆ ವೀಕೆಂಡ್ ಮಸಲತ್ತು: ಫಲ ನೀಡಲಿದ್ಯಾ ದೋಸ್ತಿಗಳ ಕಸರತ್ತು!

Shilpa D
ಬೆಂಗಳೂರು: ಆಡಳಿತಾರೂಢ ಮೈತ್ರಿ ಕೂಟ ಮತ್ತು ವಿರೋಧ ಪಕ್ಷದ ಹಗ್ಗ ಜಗ್ಗಾಟ ಶುಕ್ರವಾರವೂ ಮುಂದುವರಿದಿದೆ. ಈ ನಡುವೆ ತಮ್ಮ 14 ತಿಂಗಳ ಸರ್ಕಾರವನ್ನು ಉಳಿಸಿಕೊಳ್ಳಲು ದೋಸ್ತಿಗಳಿಗೆ ಎರಡು ದಿನ ಸಮಯಾವಕಾಶ ಸಿಕ್ಕಿದೆ. 
ಸೋಮವಾರ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲಿದ್ದು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ 2 ದಿನಗಳ ಸಮಯ ಸಿಕ್ಕಿದೆ.ಈ ಎರಡು ದಿನದಲ್ಲಿ ಮುಂಬೈಯಲ್ಲಿರುವ ರೆಬೆಲ್ ಶಾಸಕರ ಮನವೊಲಿಸಲು ಯತ್ನಿಸುವ ದೋಸ್ತಿಗಳ ಪ್ರಯತ್ನ ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನೂ ಎರಡು ದಿನಗಳ ಕಾಲ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತು ಬಿಜೆಪಿ ಶಾಸಕರಿಗೆ ರೆಸಾರ್ಟ್ ವಾಸ್ತವ್ಯವೇ ಗಟ್ಟಿ.ಮೂರು ಪಕ್ಷಗಳ ಮುಖಂಡರು ತಮ್ಮ ಶಾಸಕರನ್ನು ಬಿಗಿಯಾಗಿ ಹಿಡಿದಿಟ್ಟು ಕೊಳ್ಳಬೇಕಿದೆ.  ಈ ನಡುವೆ ಸೋಮವಾರ ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚೆ ಮುಂದುವರಿಸುವ ಸಾಧ್ಯತೆಯಿದಜೆ, ಈ ನಡುವೆ ಕಾಂಗ್ರೆಸ್ ತನ್ನ ಬೆಂಗಳೂರು ನಗರ ಶಾಸಕರ ಮನವೊಲಿಸುವ ಎಲ್ಲಾ ರೀತಿಯ ಪ್ರಯತ್ನ ಮಾಡಲಿದೆ.
ರಾಜಿನಾಮೆ ವಾಪಸ್ ಪಡೆದಿರುವ ಮಾಜಿ ಸಚಿವ ರಾಮಲಿಂಗಾ ರೆಡ್ಜಿ ರೆಬೆಲ್ ಶಾಸಕರ ಮನವೊಲಿಸಿ ಅವರನ್ನು ವಾಪಸ್ ಕರೆತರುವಂತೆ ಕಾಂಗ್ರೆಸ್ ನಾಯಕರು ಅವರ ಬಳಿ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ದೋಸ್ತಿಗಳು ರೆಬೆಲ್ ಶಾಸಕರ ಮನವೊಲಿಸಿ ವಾಪಸ್ ಕರೆ ತರಬಹುದೆಂಬ ಭೀತಿ ಬಿಜೆಪಿ ಗೆ ಮೂಡಿದೆ. ಶುಕ್ರವಾರ ಸಂಜೆ ಬೆಂಗಳೂರಿಗೆ ಬರಲು ರೆಬೆಲ್ ಶಾಸಕರು ಸಿದ್ದರಿದ್ದರು. ಆದರೆ ವಿಶ್ವಾಸ ಮತ ಯಾಚನೆ ಸೋಮವಾರಕ್ಕೆ ಮುಂದುವರಿದ ಕಾರಣ ಇನ್ನು ಎರಡು ಮೂರು ದಿನ ಮುಂಬೈಯಿಲ್ಲಿಯೇ ವಾಸ್ತವ್ಯ ಹೂಡಬೇಕಾಗಿದೆ.
SCROLL FOR NEXT