ರಾಜಕೀಯ

ಅತಂತ್ರ ಸ್ಥಿತಿಯಲ್ಲಿರುವ ಸರ್ಕಾರವನ್ನು ಬಚಾವ್ ಮಾಡಲು ದೇವೇಗೌಡರ ರಣತಂತ್ರ!

Shilpa D
ಬೆಂಗಳೂರು:  ತಮ್ಮ ಪುತ್ರ ಎಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದ ಭವಿಷ್ಯ ಅತಂತ್ರವಾಗಿದ್ದರೂ ಸರ್ಕಾರವನ್ನು ಬಿಟ್ಟುಕೊಡಲು ಮಾಜಿ ಪ್ರಧಾನಿ ಎಚ್,ಡಿ ದೇವೇಗೌಡ ಅವರಿಗೆ ಸುತಾರಾಂ ಇಷ್ಟವಿಲ್ಲ. 
ಸೊಮವಾರ ಕಾಂಗ್ರೆಸ್-ಜೆಡಿಎಸ್ ಮೈತ್ರ ಸರ್ಕಾರದ  ಭವಿಷ್ಯ ನಿರ್ಧಾರವಾಗಲಿದೆ,. ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ, ಈ ಹಿನ್ನೆಲೆಯಲ್ಲಿ ದೇವೇಗೌಡರು ಸರ್ಕಾರ ಉಳಿಸಲು ಸದ್ದಿಲ್ಲದೇ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ,
ಶನಿವಾರ ತಮ್ಮ ನಿವಾಸಕ್ಕೆ ಮಾಜಿ ಸಚಿವ ರಾಮಲಿಂಗಾ ರೆಡ್ಜಿ ಅವರನ್ನು ಕರೆಸಿಕೊಂಡು ಸುದೀರ್ಘವಾಗಿ ಚರ್ಚಿಸಿದ್ದಾರೆ. ಬಿಜೆಪಿ ನೀಡಿದ್ದ ಆಫರ್ ಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ, ಇದರ ಜೊತೆಗೆ ಮುಂಬಯಿಯಲ್ಲಿರುವ ಅತಪ್ತ ಶಾಸಕರನ್ನು ರಾಮಲಿಂಗಾ ರೆಡ್ಡಿ ಅವರ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.,
ರಾಮಲಿಂಗಾ ರೆಡ್ಡಿ ಸಲಹೆ ಪಡೆದ. ದೇವೇಗೌಡರು, ಅತೃಪ್ತ ಶಾಸಕರ ಮನವೊಲಿಸಲು ಕಾಂಗ್ರೆಸ್ ನಾಯಕರಿಗೆ ಸೂಚಿಸುವಂತೆ ತಿಳಿಸಿದ್ದಾರೆ.
SCROLL FOR NEXT