ರಾಜಕೀಯ

ಸಿಎಂ ವಿಶ್ವಾಸಮತ: 10 ನಿಮಿಷ ಮಾತ್ರ ಮಾತನಾಡಿ - ಶಾಸಕರಿಗೆ ಸ್ಪೀಕರ್ ಸೂಚನೆ

Lingaraj Badiger
ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ನಿರ್ಣಯದ ಮೇಲಿನ ಚರ್ಚೆ ಸೋಮವಾರವೂ ಮುಂದುವರೆದಿದ್ದು, ಮಾತನಾಡಲು ಪ್ರತಿ ಶಾಸಕರಿಗೆ ಕೇವಲ 10 ನಿಮಿಷ ಮಾತ್ರ ನೀಡಲಾಗುವುದು ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರು ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯನ್ನು ಇಂದೇ ಪೂರ್ಣಗೊಳಿಸಲು ನಿರ್ಧರಿಸಿದ್ದು, ಶಾಸಕರು ಕೇವಲ 10 ನಿಮಿಷಗಳು ಮಾತ್ರ ಮಾತನಾಡಬೇಕು ಎಂದು ಸೂಚಿಸಿದ್ದಾರೆ.
ಇದೇ ವೇಳೆ ಶಾಸಕರ ಪಕ್ಷಾಂತರ ಪರ್ವದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಮೇಶ್ ಕುಮಾರ್ ಅವರು,  ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರೂ ಅವರನ್ನು ಉಲ್ಲೇಖಿಸಿದರು.
"ಕಾಂಗ್ರೆಸ್ ಶಾಸಕರು ಓಡಿಹೋದರು ಎಂದು ಯಾರೋ ಪಂಡಿತ್ ನೆಹರೂಗೆ ಹೇಳಿದರು. ನೆಹರೂ ಅವರು ಶಾಸಕನನ್ನು ಈ ಕಡೆಯಿಂದ ಆ ಕಡೆ ಕರೆದೊಯ್ಯಲು ಸಾಧ್ಯವಾದರೆ ಅದು ವ್ಯಕ್ತಿಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು. ಆದ್ದರಿಂದ, ಒಂದು ಹಂತದಲ್ಲಿ ನೀವು (ಸಿದ್ದರಾಮಯ್ಯ) ಪ್ರಬಲರಾಗಿದಿದ್ದರೆ ಶಾಸಕರು ಓಡಿಹೋಗಲು ಹೇಗೆ ಸಾಧ್ಯವಾಗುತ್ತಿತ್ತು. ನೀವು (ಯಡಿಯೂರಪ್ಪ) ಕಿರುನಗೆ ಮಾಡಬೇಡಿ, ನೀವು ಈ ಮೊದಲು ಶಾಸಕರು ಓಡಿಹೋಗಲು ಸಹಕರಿಸಿದ್ದೀರಿ "ಎಂದು ಸ್ಪೀಕರ್ ಉಭಯ ನಾಯಕರ ಕಾಲೇಳೆದರು.
SCROLL FOR NEXT