ರಾಜಕೀಯ

ವಿಶ್ವಾಸಮತ ಮುಂದೂಡುವಂತೆ ಸಿಎಂ ಕುಮಾರಸ್ವಾಮಿ ಮನವಿ ತಿರಸ್ಕರಿಸಿದ ಸ್ಪೀಕರ್ ರಮೇಶ್ ಕುಮಾರ್

Lingaraj Badiger
ಬೆಂಗಳೂರು: ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ಮುಂದುವರಿಸಲು ಮತ್ತೆ ಎರಡು ದಿನ ಕಾಲಾವಕಾಶ ನೀಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದು, ಅವರ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದ್ದಾರೆ.
ಸೋಮವಾರವೇ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ಪೂರ್ಣಗೊಂಡು ಗೊತ್ತುವಳಿ ಮತಕ್ಕೆ ಹಾಕುವ ಪ್ರಕ್ರಿಯೆ ಮುಗಿಸುವುದಾಗಿ ಶುಕ್ರವಾರ ಸ್ಪೀಕರ್ ಹೇಳಿದ್ದರು. ಅದರಂತೆ ಕುಮಾರಸ್ವಾಮಿ ಇಂದು ವಿಶ್ವಾಸಮತ ನಿರೂಪಿಸಬೇಕಿದೆ.
ಸೋಮವಾರ ಕಲಾಪ ಆರಂಭಕ್ಕೂ ಮುನ್ನ ರಮೇಶ್ ಕುಮಾರ್ ಅವರನ್ನು ಜೆಡಿಎಸ್ ನಿಯೋಗದ ಜೊತೆ ಭೇಟಿಯಾದ ಕುಮಾರಸ್ವಾಮಿ, ಬುಧವಾರ ತಾವು ಬಹುಮತ ಸಾಬೀತುಪಡಿಸಲಿದ್ದು, ಇನ್ನೂ ಎರಡು ದಿನ ಕಾಲಾವಕಾಶ ಕೊಡುವಂತೆ ಮನವಿ ಮಾಡಿದರು.  ಸಚಿವರಾದ ಕೃಷ್ಣಬೈರೇಗೌಡ, ಹೆಚ್.ಡಿ.ರೇವಣ್ಣ, ಪ್ರಿಯಾಂಕ್ ಖರ್ಗೆ ಸಹ ಸ್ಪೀಕರ್ ಅವರನ್ನು ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದರು. 
ಇದಕ್ಕೆ ಬೇಸರವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್, ವಿಶ್ವಾಸಮತ ಯಾಚನೆ ಮತ್ತಷ್ಟು ವಿಳಂಬ ಮಾಡಲು ಸಾಧ್ಯವಿಲ್ಲ. ವಿಶ್ವಾಸಮತಕ್ಕೆ ಇನ್ನಷ್ಟು ಕಾಲಾವಕಾಶ ನೀಡಿದರೆ, ಸದನವನ್ನು ಒಪ್ಪಿಸುವುದು ಕಷ್ಟ. ಶುಕ್ರವಾರ ಈ ಬಗ್ಗೆ ಸ್ಪಷ್ಟವಾಗಿ ಕಲಾಪದಲ್ಲಿಯೇ ಹೇಳಿದ್ದು, ಈಗ ಮತ್ತೊಮ್ಮೆ ತಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದರು.
SCROLL FOR NEXT