ರಾಜಕೀಯ

ಅತೃಪ್ತ ಶಾಸಕರಿಗೆ ಜಿ಼ರೋ ಟ್ರಾಫಿಕ್: ಡಿಜಿಪಿಯಿಂದ ವರದಿ ಸಲ್ಲಿಕೆ

Srinivas Rao BV
ಬೆಂಗಳೂರು: ಅತೃಪ್ತ ಶಾಸಕರಿಗೆ ನಗರದಲ್ಲಿ ಸಂಚರಿಸಲು ಜಿ಼ರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ ಕುರಿತು ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್ ರಾಜು ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ವರದಿ ಸಲ್ಲಿಸಿದ್ದಾರೆ.

ಸದನದಲ್ಲಿ ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ಹಾಗೂ ಕಾಂಗ್ರೆಸ್ ನ ಎ ಟಿ ರಾಮಸ್ವಾಮಿ ವಿಶ್ವಾಸಮತ ನಿರ್ಣಯದ ಮೇಲೆ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಆಗ ಕೆಂಡಮಂಡಲವಾದ ರಮೇಶ್ ಕುಮಾರ್, ಗೃಹ ಸಚಿವ ಎಂ ಬಿ ಪಾಟೀಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. 

ಈ ಬೆಳವಣಿಗೆಯಿಂದ ಎಚ್ಚೆತ್ತ ಡಿಜಿಪಿ ಅವರು ಈ ಸಂಬಂಧ ವರದಿ ಸಲ್ಲಿಸಿದರು. ಅತೃಪ್ತ ಶಾಸಕರಿಗೆ ರಾಜಭವನದಿಂದ ವಿಮಾನ ನಿಲ್ದಾಣಕ್ಕೆ ಹಾಗೂ ಮುಂಬೈನಿಂದ ರಾಜೀನಾಮೆ ಸಲ್ಲಿಸಲು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ 11 ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ ಬಗ್ಗೆ ವರದಿ ಸಲ್ಲಿಸಿದರು. 

ಗೃಹ ಸಚಿವ ಎಂ ಬಿ ಪಾಟೀಲ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ನೇತೃತ್ವದಲ್ಲಿ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ, ಸಂಚಾರಿ ವ್ಯವಸ್ಥೆಯ ಸಿಸಿಟಿವಿ ಪೂಟೇಜ್ ಹಾಗೂ ಗುಪ್ತಚರ ಇಲಾಖೆ ಮಾಡಿದ್ದ ವಿಡಿಯೋವನ್ನು ಸ್ಪೀಕರ್ ಗೆ ನೀಡಿದರು. 

ಚರ್ಚೆ ಸಂದರ್ಭದಲ್ಲಿ ಸಚಿವ ಎಂ ಬಿ ಪಾಟೀಲ್ ಉತ್ತರ ನೀಡಿ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸಿಲ್ಲ. ರಾಜ್ಯಪಾಲರು ಈ ಶಾಸಕರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಸೂಚಿಸಿದ್ದರು. ಆದರೆ ಜೀರೋ ಟ್ರಾಫಿಕ್ ನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. 
SCROLL FOR NEXT