ರಾಜಕೀಯ

ವಿಶ್ವಾಸ ಮತಯಾಚನೆ ಮುಗಿಯದಿದ್ದರೆ ನಾನೇ ರಾಜಿನಾಮೆ ನೀಡುತ್ತೇನೆ: ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

Vishwanath S
ಬೆಂಗಳೂರು: ಸೋಮವಾರವೇ ವಿಶ್ವಾಸ ಮತಯಾಚನೆಗೆ ಅಂತಿಮ  ಡೆಡ್ ಲೈನ್ ಅನ್ನು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈ ಹಿಂದಿನ ಕಲಾಪದ ವೇಳೆ ಮಾತು ನೀಡಿದ್ದು ಇದೀಗ ನಿನ್ನೆ ಮತಯಾಚನೆ ನಡೆಯುವ ಸಾಧ್ಯತೆ ಇಲ್ಲವಾಗಿದ್ದನ್ನು ಗಮನಿಸಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಅವರಿಗೆ ನಾನೇ ರಾಜಿನಾಮೆ ಕೊಟ್ಟು ಹೋಗುತ್ತೇನೆ ಎಂದು ಹೇಳಿದ್ದಾರೆ.
ಆರ್ ವಿ ದೇಶಪಾಂಡೆ ಅವರು ಕಲಾಪದಲ್ಲಿ ಮಾತನಾಡುತ್ತಿದ್ದಾಗ ದಿನೇಶ್ ಗುಂಡುರಾವ್ ಮತ್ತು ಸಿದ್ದರಾಮಯ್ಯ ನಡುವೆ ಸ್ವಲ್ಪ ಚರ್ಚೆ ನಡೆಯಿತು. ಇದೆಲ್ಲ ನೋಡುತ್ತಿದ್ದರೆ ಮುಗಿಯುವ ಹಂತಕ್ಕೆ ಬರುವುದಿಲ್ಲ. ನಾಳೆಗೆ ಕಲಾಪವನ್ನು ಮುಂದೂಡುವಂತೆ ಸ್ಪೀಕರ್ ಅವರನ್ನು ಕೇಳಿ ಎಂದು ಸಿದ್ದರಾಮಯ್ಯರನ್ನು ದಿನೇಶ್ ಗುಂಡುರಾವ್ ಅವರು ಕೇಳುತ್ತಾರೆ. ಇದಕ್ಕೆ ಸಿದ್ದರಾಮಯ್ಯ ಅವರು ಇದೆಲ್ಲ ನೋಡಿ ಸಾಕಾಗಿ ಹೋಗಿದೆ ನಾನೇ ರಾಜಿನಾಮೆ ಕೊಟ್ಟು ಬಿಡುತ್ತೇನೆ ಎಂದು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ವಿಶ್ವಾಸ ಮತಯಾಚನೆ ಕಳೆದ ನಾಲ್ಕು ದಿನದಿಂದ ನಡೆಯುತ್ತಿದ್ದು ಕಲಾಪದಲ್ಲಿ ನಡೆಯುತ್ತಿರುವ ಪ್ರತಿಯೊಂದು ನಡೆಯನ್ನು ರಾಜ್ಯವಲ್ಲ ಇಡೀ ದೇಶದ ಜನತೆ ನೋಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಿದ್ದರಾಮಯ್ಯ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 
SCROLL FOR NEXT