ರಾಜಕೀಯ

'ತಮ್ಮ ರಾಜಿನಾಮೆ ಪತ್ರವನ್ನು ಜೇಬಿನಲ್ಲಿಟ್ಟುಕೊಂಡು ಸದನಕ್ಕೆ ಬಂದಿದ್ದರು ಸ್ಪೀಕರ್ ರಮೇಶ್ ಕುಮಾರ್'

Shilpa D
ಬೆಂಗಳೂರು: ನಾಲ್ಕು ದಿನಗಳ ನಿರಂತರ ಎಳೆದಾಟದ ನಂತರ ಮಂಗಳವಾರ ವಿಶ್ವಾಸಮತಯಾಚನೆ ಮಾಡಿಯೇ ತೀರುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದರು. ಜೊತೆಗ ತಮ್ಮ ರಾಜಿನಾಮೆ ಪತ್ರವನ್ನು ಸ್ಪೀಕರ್ ಜೊತೆಗೆ ತಂದಿದ್ದರು.
ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು 7 ಗಂಟೆಯೊಳಗೆ ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ವಿಫಲವಾದರೇ ರಾಜಿನಾಮೆ ನೀಡಲು ಸಿದ್ದರಾಗಿಯೇ ಬಂದಿದ್ದರು.
ನನ್ನ ಆತ್ಮಗೌರವಕ್ಕೆ ನೋವಾದರೇ, ಧಕ್ಕೆಯಾದರೇ, ಆಕ್ಷಣದಲ್ಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿ, ರಾಜಿನಾಮೆ ಪತ್ರವನ್ನು ಜೇಬಿನಲ್ಲಿಟ್ಟುಕೊಂಡು ಬಂದಿರುವುದಾಗಿ ಸದನದಲ್ಲಿ ಸ್ಪೀಕರ್ ಶಾಸಕರಿಗೆ ಎಚ್ಚರಿಕೆ ನೀಡಿದ್ದರು. ನಿಯಮಾವಳಿ ಪ್ರಕಾರ ಕೆಲಸ ಮಾಡಲು ಅವಕಾಶ ನೀಡಬೇಕೆಂದು ಸದನದಲ್ಲಿ ಶಾಸಕರಿಗೆ ಎಚ್ಚರಿಕೆ ನೀಡಿದ್ದರು.
ಸೋಮವಾರವೇ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಮುಗಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿತ್ತು, ಆದರೆ ಸಾಧ್ಯವಾಗದ ಕಾರಣ, ದೋಸ್ತಿಗಳಿಗೆ ಮಂಗಳವಾರಕ್ಕೆ ಸ್ಪೀಕರ್ ಡೆಡ್ಲೈನ್ ಕೊಟ್ಟಿದ್ದರು. ಹಾಗೂ ಚರ್ಚೆಯನ್ನು ನಿಲ್ಲಿಸಿ ವಿಶ್ವಾಸಮತಯಾಚಿಸುವಂತೆ ದೋಸ್ತಿ ನಾಯಕರುಗಳಿಗೆ ಸೂಚಿಸಿದ್ದರು. ದಿನದ ಅಂತ್ಯದಲ್ಲಿ  ಸ್ಪೀಕರ್ ದೋಸ್ತಿ ಪಕ್ಷ ಮತ್ತು ವಿರೋಧ ಪಕ್ಷಗಳ ಹೃದಯ ಗೆದ್ದಿದ್ದರು.
ಮೈತ್ರಿ ಪಕ್ಷಗಳಿಗೆ ಚರ್ಚೆ ಮಾಡಲು ಅನುವು ಮಾಡಿಕೊಟ್ಟಿದ್ದ ಸ್ಪೀಕರ್, ಕೊಟ್ಟ ಮಾತಿನಂತೆ ಮಂಗಳವಾರ ವಿಶ್ವಾಸ ಮತ ಯಾಚನೆಗೆ ಗಡುವು ನೀಡಿ ಬಿಜೆಪಿ ಬೇಡಿಕೆಯನ್ನು ಈಡೇರಿಸಿದ್ದರು.
SCROLL FOR NEXT