ರಾಜಕೀಯ

ಮತ್ತೆ 'ಯಡಿಯೂರಪ್ಪ' ಆಗಿ ಮರಳಿದ 'ಯಡ್ಯೂರಪ್ಪ'!

Nagaraja AB
ಬೆಂಗಳೂರು: ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬಿಜೆಪಿ  ಹಿರಿಯ ಮುಖಂಡ ಯಡಿಯೂರಪ್ಪ ತಮ್ಮ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ.
ಇಂದಿನ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅನುಮತಿ ಕೋರಿ ರಾಜ್ಯಪಾಲ ವಾಜುಭಾಯ್ ವಾಲಾ ಅವರಿಗೆ ಬರೆದ ಪತ್ರದಲ್ಲಿ ಯಡ್ಯೂರಪ್ಪ (Yeddyurappa )
 ಯಡಿಯೂರಪ್ಪ ('Yediyurappa )ಎಂದು ಸಹಿ ಹಾಕಿದ್ದಾರೆ. 
2007ರಲ್ಲಿ ಜ್ಯೋತಿಷ್ಯಗಳ ಸಲಹೆಯಂತೆ ಯಡ್ಯೂರಪ್ಪ ತಮ್ಮ ಹೆಸರನ್ನು ಯಡಿಯೂರಪ್ಪ ಎಂದು ಬದಲಾಯಿಸಿಕೊಂಡಿದ್ದರು. ಆದರೆ, ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ಎದುರಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ವಿರುದ್ಧ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ತಮ್ಮ ಹೆಸರಿನಲ್ಲಿನ ಕಾಗುಣಿತ ದೋಷವನ್ನು ಮತ್ತೆ ಸರಿಪಡಿಸಿಕೊಂಡಿದ್ದಾರೆ. 
ಜುಲೈ 22 ರಂದು ನಡೆದ ವಿಶ್ವಾಸಮತಯಾಚನೆ ವೇಳೆಯಲ್ಲಿ  ಅಂಕಿಸಂಖ್ಯೆ ಆಟದಲ್ಲಿ  ಮೈತ್ರಿ ಸರ್ಕಾರವನ್ನು ಸೋಲಿಸಿದದ್ದು ಶುಭ ಫಲ ಎಂದು 75 ವರ್ಷ ದಾಟಿರುವ ಯಡಿಯೂರಪ್ಪ ನಂಬಿದ್ದಾರೆ. 
ರಾಷ್ಟ್ರೀಯ ವರಿಷ್ಠರು ಮುಖ್ಯಮಂತ್ರಿ ಸ್ಥಾನಕ್ಕೆ ಬೇರೆಯವರ ಹುಡುಕಾಟ ನಡೆಸುತ್ತಿದ್ದಾರೆ ಎಂಬ ಮಾತು ಹರಿದಾಡುತಿತ್ತು.ಈ ಮಧ್ಯೆ ಹೆಸರು ಬದಲಾಯಿಸಿಕೊಂಡರೆ 2023ರವರೆಗೂ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂಬುದು ಅವರ ನಂಬಿಕೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
SCROLL FOR NEXT