ಕೆ.ಆರ್.ರಮೇಶ್ ಕುಮಾರ್ 
ರಾಜಕೀಯ

ಇನ್ನಷ್ಟು ಶಾಸಕರ ಅನರ್ಹತೆ ಭೀತಿ: ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ನಿರ್ಧಾರ?

ಮೂರು ಜನ ಬಂಡಾಯ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕ....

ಬೆಂಗಳೂರು: ಮೂರು ಜನ ಬಂಡಾಯ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕ ವಿಧಾನಸಭೆಯಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಗಳಿದೆ.
ಕಾಂಗ್ರೆಸ್-ಜೆಡಿ-ಎಸ್ ಸರ್ಕಾರವನ್ನು ಪತನಗೊಳಿಸಿ ಬಿಜೆಪಿಯ ರಾಜ್ಯಾಧ್ಯಕ್ಷ  ಬಿಎಸ್ ಯಡಿಯೂರಪ್ಪ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.ಈ ವೇಳೆ ಸ್ಪೀಕರ್ ನಿರ್ಧಾರ ಉಳಿದ 14 ಮಂದಿ ಅತೃಪ್ತ ಶಾಸಕರಿಗೆ ಭೀತಿಯನ್ನುಂಟು ಮಾಡಿದೆ.ಎಂದು  ಈ ವಿಷಯದ ಮೂಲ ತಿಳಿದಿರುವ ಇಬ್ಬರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದವರಾದ ಸ್ಪೀಕರ್  ಅವರನ್ನು ಹುದ್ದೆಯಿಂದ ವಜಾಗೊಳಿಸಲು ನಿರ್ಣಯವನ್ನು ತೆಗೆದುಕೊಳ್ಳಲು ಮುಂದಾಗಿರುವ ಕೇಸರಿ ಪಕ್ಷ ಈ ಸಂಬಂಧ ನೋಟೀಸ್ ಜಾರಿಗೆ ತೀರ್ಮಾನಿಸಿದೆ.ಮತ್ತಷ್ಟು ಅತೃಪ್ತ ಶಾಸಕರನ್ನು ಅನರ್ಹಗೊಳಿಸುವ ಸ್ಪೀಕರ್ ತೀರ್ಮಾನಕ್ಕೆ ಮುನ್ನವೇ ಅವರನ್ನು ಸ್ಪೀಕರ್ ಸ್ಥಾನದಿಂದ ವಜಾ ಮಾಡಲು ಪಕ್ಷ ಯೋಜಿಸಿದೆ ಎಂದು ಹೇಳಲಾಗಿದೆ. ಇನ್ನು ಅತೃಪ್ತ ಶಾಸಕರಲ್ಲಿ ಕೆಲವರು ಯಡಿಯೂರಪ್ಪ ಅವರ ಹೊಸ ಸರ್ಕಾರದಲ್ಲಿ ಮಂತ್ರಿಗಳಾಗುವ ನಿರೀಕ್ಷೆಗಳಿದೆ.
ಬಿಜೆಪಿ ಸರ್ಕಾರ ರಚನೆ ವಿಳಂಬವಾದ ನಡುವೆಯೇ ಸ್ಪೀಕರ್ ರಮೇಶ್ ಕುಮಾರ್ ಮೂವರು ಶಾಸಕರನ್ನು ಅನರ್ಹಗೊಳಿಸಿ ಗುರುವಾರ ಹೊರಡಿಸಿದ್ದ ಆದೇಶ ಅತೃಪ್ತ ಶಾಸಕ ವಲಯದಲ್ಲಿ ಭೀತಿ ಹುಟ್ಟಿಸಿದೆ ಎಂದು ಹೆಸರು ಹೇಳಲಿಚ್ಚಿಸದ ಒಬ್ಬ ನಾಯಕರು ಹೇಳಿದ್ದಾರೆ.ಸ್ಪೀಕರ್ ಅವರನ್ನು ಕೆಳಗಿಳಿಸಲು ನಿರ್ಣಯ ಮಂಡನೆ ಅತಿ ಶೀಘ್ರವಾಗಿ ಆಗಲಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ಒಂದೆರಡು ದಿನಗಳಲ್ಲಿ 14 ಇತರ ಶಾಸಕರಿಗೆ ಸಂಬಂಧಿಸಿದಂತೆ ರಾಜೀನಾಮೆ ಮತ್ತು ಅನರ್ಹತೆ ಮನವಿ ಬಗೆಗೆ ತೀರ್ಮಾನಿಸುವುದಾಗಿ  ಸ್ಪೀಕರ್ ಗುರುವಾರ ಹೇಳಿದ್ದರು.
ಸಂವಿಧಾನದ 179 (ಸಿ) ವಿಧಿಯನ್ವಯ ವಿಧಾನಸಭೆಯ ಸ್ಪೀಕರ್ ಅವರನ್ನು ಬಹುಮತದಿಂದ ಅಂಗೀಕರಿಸಿದ ನಿರ್ಣಯದ ಮೂಲಕ ಅವರ ಹುದ್ದೆಯಿಂದ ವಜಾಗೊಳಿಸಬಹುದು.ಹಾಲಿ ಸ್ಪೀಕರ್ ವಿರುದ್ಧ ಅಂತಹ ನಿರ್ಣಯವನ್ನು  ಮಂಡಿಸಲು ಮುನ್ನವೇ ಹದಿನಾಲ್ಕು ದಿನಗಳ ಅವಧಿಗೆ ನೋಟೀಸ್ ನೀಡುವ ಅಗತ್ಯವಿದೆ. ಆದರೆ ಅಂತಹ ನಿರ್ಣಯವು ಸ್ಪೀಕರ್‌ನ ಶಕ್ತಿಯನ್ನು ಮಿತಿಗೊಳಿಸುತ್ತದೆ. ಪರಿಣಾಮಕಾರಿಯಾಗಿ, ಒಮ್ಮೆ ಅಂತಹ ನಿರ್ಣಯ ಮಂಡಿಸಿದ ನಂತರ ಸ್ಪೀಕರ್ ಯಾರನ್ನೂ ಅನರ್ಹಗೊಳಿಸಲು ಆಗುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಮ ಮಂದಿರ ಟ್ರಸ್ಟ್‌ಗೆ ಮೊದಲ CEO ನೇಮಕ; 'ಆಪರೇಷನ್ ಸಿಂಧೂರ್'​​ನಲ್ಲಿ ಭಾಗಿಯಾಗಿದ್ದ ಜಿತೇಂದ್ರ ಮಿಶ್ರಾ ಹೆಸರು ಘೋಷಣೆ!

ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಸಹಪಾಠಿ ಮೇಲೆ ಹಲ್ಲೆ: ನಟ ದುನಿಯಾ ವಿಜಯ್ ಪುತ್ರನ ವಿರುದ್ಧ FIR ದಾಖಲು

Nepal Floods: 'ನೀವೇನ್ ದಾನ ಕೊಡ್ತಿಲ್ಲ.. ಪ್ರವಾಹಕ್ಕೆ ನೀವೇ ಕಾರಣ.. ಪರಿಹಾರ ಕೊಡಿ ಅಷ್ಟೇ': ಭಾರತ, ಚೀನಾ, ಅಮೆರಿಕಕ್ಕೆ ನೇಪಾಳ ಖಡಕ್ ಆಗ್ರಹ!

‘15 ರೂ. ಹೇರ್ ಡೈ’: ಕಿಂಗ್ ಚಾರ್ಲ್ಸ್ ಭೇಟಿಗೂ ಮುನ್ನ ಪಾಕಿಸ್ತಾನ ನಾಯಕ Babar Azam ಫುಲ್ ಟ್ರೋಲ್!

ಮೇಕೆದಾಟು ವಿಚಾರದಲ್ಲಿ ಕರ್ನಾಟಕ ದಿಟ್ಟ ಹೆಜ್ಜೆ; CWC ಮುಖ್ಯಸ್ಥರ ಜೊತೆ ಸಚಿವರ ಮಹತ್ವದ ಮಾತುಕತೆ