ಬೆಳಗಾವಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಕುಸಿತಕ್ಕೂ ಜಾರಕಿಹೋಳಿ ಕುಟುಂಬಕ್ಕೂ ಸಂಬಂಧವಿಲ್ಲ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೋಳಿ ಸೋದರ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಹೇಳಿದ್ದಾರೆ.ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಒಳಗಿನ ಬೇಗುದಿ ಬಗೆಗೆ ನಮಗೆ ತಿಳಿದಿದೆ.ಮತ್ತು ಸೂಕ್ತ ಸಮಯದಲ್ಲಿ ಅವುಗಳನ್ನು ಬಹಿರಂಗಪಡಿಸುತ್ತೇನೆ ಎಂದು ಗೋಕಾಕ್‌ನ ಕಾಂಗ್ರೆಸ್ ನಾಯಕ ಹೇಳಿದರು
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವದಕ್ಕೆ ಜಾರಕಿಹೋಳಿ ಸೋದರರು ಎಲ್ಲಾ ಬಗೆಯ ಯತ್ನ ನಡೆಸಿದರೆನ್ನುವುದು "ಸುಳ್ಳು" ಹಾಗೂ ಕಪೋಲಕಲ್ಪಿತ ಎಂದ ಸತೀಶ್ ಜಾರಕಿಹೋಳಿ "ಸರ್ಕಾರ ಪತನವಾದದ್ದಕ್ಕೆ ಸಹೋದರರನ್ನು ದೂಷಿಸಬಾರದು. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ರಹಸ್ಯಗಳ ಬಗ್ಗೆ ನನಗೆ ತಿಳಿದಿದೆ. ಕುಸಿತಕ್ಕೆ ಕಾರಣವಾದ ಒಂದು ‘ವಿಶೇಷ ವಿಷಯ’ ಇದೆ. ಮತ್ತು ನಾನು ಅದನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇನೆ. ’’ಅವರು ಹೇಳಿದ್ದಾರೆ.
ಸತೀಶ್ ಅವರ ಸಹೋದರ ರಮೇಶ್ ಸೇರಿದಂತೆ ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರನವನ್ನು ಅವರು ಸ್ವಾಗತಿಸಿದ್ದಾರೆ.ಅಲ್ಲದೆ ಇನ್ನೂ ಕೆಲ ದಿನಗಳ ಮುನ್ನವೇ ಸ್ಪೀಕರ್ ಈ ನಿರ್ಧಾರ ತೆಗೆದುಕೊಂಡಿದ್ದರೆ ಸಮ್ಮಿಶ್ರ ಸರ್ಕಾರ ಉಳಿಯುತ್ತಿತ್ತು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯ ಆಪರೇಷನ್ ಕಮಲ ಬಗೆಗೆ ಪಕ್ಷದ ನಾಯಕರನ್ನು ಎಚ್ಚರಿಸಿದರೂ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಲಿಲ್ಲ ಕಾಂಗ್ರೆಸ್ “ರಿವರ್ಸ್ ಆಪರೇಷನ್ ” ನಡೆಸಿದರೆ ಅದು ಯಶಸ್ವಿಯಾಗಬಹುದು ಎಮ್ದು ಅವರು ಅವರು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos