ರಾಜಕೀಯ

ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜಿನಾಮೆ

Vishwanath S
ಬೆಂಗಳೂರು: ನೂತನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ವಿಶ್ವಾಸ ಮತ ಗೆದ್ದು, ಧನವಿನಿಯೋಗಕ್ಕೆ ಅಂಗೀಕಾರ ದೊರೆಯುತ್ತಿದ್ದಂತೆ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜಿನಾಮೆ ನೀಡಿದ್ದಾರೆ.
ವಿಧಾನಸಭೆಯಲ್ಲಿ 14 ತಿಂಗಳು 4 ದಿನ ನಾನು ಸಂವಿಧಾನಕ್ಕೆ ಚ್ಯುತಿ ಬರದಂತೆ ಕೆಲಸ ಮಾಡಿದ್ದೇನೆ ಎಂದು ಭಾವಿಸುತ್ತೇನೆ. ನನ್ನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ವಿಶ್ವಾಸಮತ ಪ್ರಕ್ರಿಯೆ ಮುಗಿಯುತ್ತಿದ್ದಂತೆ ರಮೇಶ್ ಕುಮಾರ್ ಅವರು ವಿದಾಯ ಭಾಷಣ ಮಾಡಿದರು. ಈ ದೇಶದಲ್ಲಿ ಭ್ರಷ್ಟಾಚಾರದ ಮೂಲ ಚುನಾವಣೆಗಳು. ಚುನಾವಣೆಗಳಲ್ಲಿ ಬದಲಾವಣೆ ಆಗದಿದ್ದರೆ, ಭ್ರಷ್ಟಾಚಾರ ನಿರ್ಮೂಲನೆ ಆಗುವುದಿಲ್ಲ. ಲೋಕಾಯುಕ್ತ ಕಾನೂನು ಸಹ ಸುಧಾರಣೆ ಆಗಬೇಕು ಎಂದರು.
ರಮೇಶ್ ಕುಮಾರ್ ಅವರು ತಮ್ಮ ರಾಜಿನಾಮೆ ಪತ್ರವನ್ನು ಉಪಸಭಾಧ್ಯಕ್ಷರು ಕೃಷ್ಣಾರೆಡ್ಡಿ ಅವರಿಗೆ ನೀಡಿ ಸದನದಿಂದ ನಿರ್ಗಮಿಸಿದರು.
SCROLL FOR NEXT