ರಾಜಕೀಯ

ಶಾಸಕರ ಅನರ್ಹತೆ ವಿವಾದ: ಹೈಕೋರ್ಟ್ ಗೆ ದಿನೇಶ್ ಗುಂಡೂರಾವ್ ಕೇವಿಯಟ್

Nagaraja AB
ಬೆಂಗಳೂರು: ಅನರ್ಹಗೊಂಡಿರುವ 8 ಕಾಂಗ್ರೆಸ್ ಶಾಸಕರು ತಮ್ಮ ಅನರ್ಹತೆ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದರೆ ತಮಗೆ ನೋಟಿಸ್ ನೀಡಿದ ನಂತರವೇ ಮಧ್ಯಂತರ ಆದೇಶ ಹೊರಡಿಸುವಂತೆ ಕೋರಿ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೈಕೋರ್ಟ್ ಗೆ ಕೇವಿಯಟ್ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಅನರ್ಹಗೊಂಡ ಶಾಸಕರಾದ ಪ್ರತಾಪ್ ಗೌಡ ಪಾಟೀಲ್, ಬಿ. ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್ .ಟಿ. ಸೋಮಶೇಖರ್ , ಬೈರತಿ ಬಸವರಾಜು, ಆನಂದ್ ಸಿಂಗ್, ರೋಷನ್ ಬೇಗ್ ಹಾಗೂ ಮುನಿರತ್ನ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ.
ಪಕ್ಷದಿಂದ ಬಂಡಾಯವೆದ್ದು, ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಹಾಗೂ ವಿಪ್ ಉಲ್ಲಂಘಿಸಿದ 8 ಶಾಸಕರನ್ನು ಅನರ್ಹಗೊಳಿಸುವಂತೆ  ವಿಧಾನಸಭಾ ಸ್ಪೀಕರ್ ಗೆ ಮನವಿ ಸಲ್ಲಿಸಲಾಗಿತ್ತು. ಇದನ್ನು ಪರಿಗಣಿಸಿದ್ದ ಸ್ಪೀಕರ್ ಜುಲೈ 28 ರಂದು ಈ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.
SCROLL FOR NEXT