ರಾಜಕೀಯ

ಕೇಂದ್ರ ಗೃಹ ಸಚಿವಾಲಯ ಇನ್ನು ಮುಂದೆ, ಕ್ಲೀನ್ ಚಿಟ್ ನೀಡುವ ಇಲಾಖೆ: ಪ್ರಿಯಾಂಕ್ ಖರ್ಗೆ

Srinivas Rao BV
ಬೆಂಗಳೂರು: ಅಮಿತ್ ಶಾ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಚಿತ್ತಾಪುರ ಕಾಂಗ್ರೆಸ್ ಶಾಸಕ, ಸಚಿವ ಪ್ರಿಯಾಂಕ್ ಖರ್ಗೆ ಗೃಹ ಸಚಿವಾಲಯದ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದಾರೆ. 
ಗೃಹ ಸಚಿವಾಲಯವನ್ನು ಇನ್ನು ಮುಂದಿನ ದಿನಗಳಲ್ಲಿ ಗೃಹ ಹಾಗೂ ಕ್ಲೀನ್ ಚಿಟ್ ನೀಡುವ ಸಚಿವಾಲಯ ಎಂದು ಕರೆಯಬಹುದೆಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ 35,000 ಕೋಟಿ ರೂಪಾಯಿ ಅಕ್ರಮ ಗಣಿಗಾರಿಕೆ ಹಗರಣ ನಡೆದಿರುವ ಹಿನ್ನೆಲೆಯಲ್ಲಿ ಇಲ್ಲಿನ ನಾಯಕರ ಮೇಲೂ ತನಿಖೆಯ ತೂಗುಗತ್ತಿ ಎದುರಾಗಿದೆ. ಇದೇ ವೇಳೆ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಅಮಿತ್ ಶಾ ಗೃಹ ಸಚಿವರಾಗಿ ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವನ್ನು ಇನ್ನು ಮುಂದಿನ ದಿನಗಳಲ್ಲಿ ಕ್ಲೀನ್ ಚಿಟ್ ನೀಡುವ ಸಚಿವಾಲಯ ಎಂದು ಕರೆಯಬಹುದೆಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 
SCROLL FOR NEXT