ರಾಜಕೀಯ

ಜೆಡಿಎಸ್-ಕಾಂಗ್ರೆಸ್ ನಡುವೆ ಸಮನ್ವಯ ಎಲ್ಲಿದೆ; ಪಕ್ಷ ಸೋತಿದೆ ಅಷ್ಟೇ, ಕಾಂಗ್ರೆಸ್ ಕಥೆ ಮುಗಿದಿಲ್ಲ: ಮೊಯ್ಲಿ

Shilpa D
ಬೆಂಗಳೂರು: ಮೋದಿ ಅಲೆಯಲ್ಲಿ ಸದೃಢವಾಗಿ ನಿಲ್ಲಲು ಸಮರ್ಥವಾಗದ ಕಾಂಗ್ರೆಸ್ ಗೆ ಜೆಡಿಎಸ್ ಜೊತೆಗಿನ ಸಮನ್ವಯ ಕೊರತೆ ಕೂಡ ರಾಜ್ಯದಲ್ಲಿ ಪಕ್ಷದ ಪರಿಸ್ಥಿತ ಮತ್ತಷ್ಟು ಹಾಳಾಗಲು ಕಾರಣ ಎಂದು ಮಾಜಿ ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ.ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಹೀನಾಯ ಸೋಲು ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರ: ಕಾಂಗ್ರೆಸ್ ಪಕ್ಷ ಎಡವಿದ್ದು ಎಲ್ಲಿ?
ರಾಷ್ಟ್ರೀಯ ಸಮಸ್ಯೆಗಳು ಪ್ರಮುಖವಾಗುತ್ತವೆ. ಈ ಬಗ್ಗೆ ಎಐಸಿಸಿ ಅಧ್ಯಯನ ನಡೆಸಲಿದೆ, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ, ನಾವು ಚುನಾವಣೆಯಲ್ಲಿ ಸೋತಿದ್ದೇವೆ, ಹಾಗಂದ ಮಾತ್ರಕ್ಕೆ ಪಕ್ಷದ ಕಥೆ ಮುಗಿದೇ ಹೋಯಿತು ಎಂದರ್ಥವಲ್ಲ, 1984 ರಲ್ಲಿ ಬಿಜೆಪಿ ಕೇವಲ 2 ಸೀಟು ಗೆದ್ದಿತ್ತು. ಬಿಜೆಪಿ ಕಥೆ ಮುಗಿಯಿತು ಎಂದು ನಾವು ಹೇಳಿರಲಿಲ್ಲ, ಆದರೆ ಬಿಜೆಪಿ ನಾಯಕರು ಮಾತ್ರ ಇಂಥ ಹೇಳಿಕೆ ನೀಡುತ್ತಿದ್ದಾರೆ.
ಪ್ರ: ಬಿಜೆಪಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಜನಾದೇಶ ಹೇಗೆ ಸಿಕ್ಕಿತು?
ಈ ವಿಷಯವನ್ನು ವಿಮರ್ಶೆ ಮಾಡುವ ಅವಶ್ಯಕತೆಯಿದೆ, ಬಿಜೆಪಿ ಸಾಧನೆಗಳ ಬಗ್ಗೆ ಅಥವಾ ಕಾರ್ಯಕ್ರಮಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲೂ ಚರ್ಚೆಯಾಗಿಲ್ಲ, ಇದೆಲ್ಲಾ ಪುಲ್ವಾಮಾ ಮತ್ತು ಬಾಲಾಕೋಟ್ ನಿಂದ, ಇದರ ಬಗ್ಗೆ ನಾನು ಹೆಚ್ಚಿಗೆ ಕಮೆಂಟ್ ಮಾಡುವುದಿಲ್ಲ, ಆದರೆ ಮುಂದೊಂದು ದಿನ ಇದರ ಬಗ್ಗೆ ಎಲ್ಲೆಜೆ ಚರ್ಚೆ ನಡೆಯಲಿದೆ.
ಪ್ರ: ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಏನೆಲ್ಲಾ ಕ್ರಮ ಕೈಗೊಳ್ಳಬೇಕಿತ್ತು?
ಬಿಜೆಪಿ ಚುನಾವಣೆಯಲ್ಲಿ ಗೆದ್ದಿದೆ. ನಮ್ಮದು ಕೂಡ ಕೇಡರ್ ಬೇಸಿಸ್ ಪಕ್ಷ ಆಗಲಿದೆ,  ಬಿಜೆಪಿ ಗೆಲುವಿನ ಬಗ್ಗೆ ಕಾಂಗ್ರೆಸ್ ನಾಯಕರು ಚಿಂತಿಸುವ ಅಗತ್ಯವಿಲ್ಲ,  ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವತ್ತ ನಮ್ಮ ಗಮನ ಹರಿಸುತ್ತೇವೆ, ಕಾಂಗ್ರೆಸ್ ಬಿಜೆಪಿ ಅಥವಾ ಆರ್ ಎಸ್ ಎಸ್ ಅನ್ನು ಅನುಸರಿಸುವುದಿಲ್ಲ,. ದೇಶದ ಒಳಿತಿಗಾಗಿ ಕಾಂಗ್ರೆಸ್ ಪಕ್ಷ ಮಹತ್ವದ ದೃಷ್ಟಿಕೋನ ಹೊಂದಿದೆ.
ಪ್ರ: ಐಸಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜಿನಾಮೆ ಬಗ್ಗೆ ಏನು ಹೇಳುತ್ತೀರಿ?
ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದುಕೊಂಡು ಪಕ್ಷವನ್ನು ಮುನ್ನಡೆಸಬೇಕು,. ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ 25ರಲ್ಲಿ ಗೆದ್ದಿದೆ , ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆ ಪಡೆದಿದೆ  ಇನ್ನೂ ಹೆಚ್ಚಿನ ಸೀಟು ಗೆಲ್ಲಲು ಬಿಜೆಪಿ ಗೆ ಯಾವುದೇ ಅರ್ಹತೆಯಿಲ್ಲ.
ಪ್ರ: ಜೆಡಿಎಸ್ ಜೊತೆಗಿನ ಮೈತ್ರಿ ತಿರುಗು ಬಾಣವಾಯಿತೇ?
ಹೌದು, ಕಾಂಗ್ರೆಸ್ ಸೋಲಿಗೆ ಅದುವೇ ಪ್ರಮುಖ ಕಾರಣ, ಯಾರನ್ನು ಸೋಲಿಸಲು ಯಾರು ಕಾರಣರಾದರೂ ಎಂದು ನಾನಿಲ್ಲಿ ಹೇಳುವುದಿಲ್ಲ, ಕೇರಳದಲ್ಲಿ ಯುಡಿಎಫ್ ಪಕ್ಷಗಳ ಸರಿಯಾದ ರೀತಿಯ ಸಮನ್ವಯದಿಂದಾಗಿ ಅಲ್ಲಿನ ಸ್ಥಿತಿಗತಿಯೇ ಬದಲಾಯಿತು. ಕರ್ನಾಟಕದಲ್ಲಿ ನಾವು ಯಾವ ರೀತಿಯ ಸಮನ್ವಯ ಹೊಂದಿದ್ದೇವೆ, ಎಲ್ಲಿಯೂ ಮೈತ್ರಿ ಧರ್ಮ ಸರಿಯಾಗಿ ಪಾಲನೆಯಾಗಿಲ್ಲ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕೆ ಇದು ಸರಿಯಾದ ಮಾರ್ಗವಲ್ಲ. 
SCROLL FOR NEXT