ರಾಜಕೀಯ

ಗ್ರಾಮ ವಾಸ್ತವ್ಯದ ಗಿಮ್ಮಿಕ್ ಮಾಡಲು ಮತ್ತೆ ಯಾವ ಚುನಾವಣೆ ಬರ್ತಿದೆ: ಸಿಎಂ ಪರ ಸಚಿವ ಬಂಡೆಪ್ಪ ಕಾಶೆಂಪೂರ್ ಬ್ಯಾಟಿಂಗ್

Shilpa D
ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಗ್ರಾಮ ವಾಸ್ತವ್ಯ ಗಿಮ್ಮಿಕ್ ಎಂದು ವ್ಯಂಗ್ಯವಾಡಿದೆ.
ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸಚಿವ ಬಂಡೆಪ್ಪ ಕಾಶೆಂಪೂರ್ ಸಮರ್ಥಿಸಿಕೊಂಡಿದ್ದಾರೆ, ಬಿಜೆಪಿಗೆ ಗ್ರಾಮವಾಸ್ತವ್ಯದ ಮಹತ್ವ ಗೊತ್ತಿಲ್ಲ, ಸದ್ಯದಲ್ಲಿ ಯಾವುದೇ ಚುನಾವಣೆಯೂ ಇಲ್ಲ, ಹೀಗಿರುವಾಗ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹೇಗೆ ಗಿಮ್ಮಿಕ್ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಗ್ರಾಮ ವಾಸ್ತವ್ಯ ಎಂಬುದು ನೈಜ ಪ್ರಜಾ ಪ್ರಭುತ್ವದ ಸಂಕೇತ, ಗ್ರಾಮಗಳಿಗೆ ತೆರಳುವ ಮುಖ್ಯಮಂತ್ರಿಗಳು ಅಲ್ಲಿನ ಜನರ ಸಮಸ್ಯೆ ಆಲಿಸುತ್ತಾರೆ. ಸಿಎಂ ಇದ್ದಲ್ಲಿಗೆ ಜನ ಬಂದು ಕಷ್ಟ ಸುಖ ಹೇಳಿಕೊಂಡು ಪರಿಹಾರ ಪಡೆಯಬಹುದಾಗಿದೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ಜನರ ಹತ್ತಿರ ಹೋಗುವ ರಾಜಕಾರಣಿಗಳು, ಬೇರೆ ಸಮಯದಲ್ಲಿ ಜನ ಸಾಮಾನ್ಯರ ನಡುವೆ ಹೋಗಿ ಅವರ ಸಮಸ್ಯೆ ಆಲಿಸಿದ್ದಾರಾ ಎಂದು ಬಂಡೆಪ್ಪ ಪ್ರಶ್ನಿಸಿದ್ದಾರೆ.
2006 ರಲ್ಲಿ ಸುವರ್ಣ ಗ್ರಾಮ ಯೋಜನೆ ಆರಂಭಿಸಿದಾಗ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಅಫ್ಜಲಪುರದ ಮಣ್ಣೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಹೀಗಾಗಿ ನಾನು ಮತ್ತು ಇತರೆ ಜೆಡಿಎಸ್ ನಾಯಕರು ಉತ್ತರ ಕರ್ನಾಟಕ ಭಾಗದಿಂದ ಗ್ರಾಮ ವಾಸ್ತವ್ಯ ಮಾಡುವಂತೆ ಒತ್ತಡ ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ.
SCROLL FOR NEXT