ರಾಜಕೀಯ

ಗುರಮಿಟ್ಕಲ್ ಗೆ ಮೊದಲು ಹೋಗೋರು ಯಾರು: ಯಡಿಯೂರಪ್ಪ ಅಥವಾ ಕುಮಾರಸ್ವಾಮಿ?

Shilpa D
ಬೆಂಗಳೂರು: ರಾಜ್ಯದಲ್ಲಿ  ಅಧಿಕಾರ ಹಿಡಿದಿರುವ ಮೈತ್ರಿ ಪಕ್ಷಗಳಲ್ಲಿ ನಿತ್ಯ ಗೊಂದಲ ಹೆಚ್ಚಾಗುತ್ತಿರುವುದನ್ನು  ಮನಗಂಡಿರುವ ಬಿಜೆಪಿ ಅದರ ಮೇಲೆ ಮತ್ತಷ್ಟು ಒತ್ತಡ ಹಾಕಲು ರಾಜ್ಯದ ಉದ್ದಲಗಕ್ಕೂ ಪ್ರತಿಭಟನೆ ನಡೆಸುವ ತೀರ್ಮಾನ  ತೆಗೆದುಕೊಂಡಿದೆ. 
ಜೊತೆಗೆ ಸಿಎಂ ಕುಮಾರಸ್ವಾಮಿ ಅವರು ಜೂನ್ 21 ರಂದು ಗ್ರಾಮ ವಾಸ್ತವ್ಯ ಹೂಡಲು ಇಚ್ಚಿಸಿರುವ ಗುರುಮಿಟ್ಕಲ್ ನಿಂದಲೇ ಬರ ಪರಿಶೀಲನೆ ಕಾರ್ಯಕ್ರಮವನ್ನು ಯಡಿಯೂರಪ್ಪ ಆರಂಭಿಸಲಿದ್ದಾರೆ. ಹೀಗಾಗಿ ಮೊದಲು ಗುರುಮಿಟ್ಕಲ್ ಗೆ ಯಾರು ಮೊದಲು ಪ್ರವೇಶಿಸುತ್ತಾರೆ ಎಂಬುದೇ ಸದ್ಯದ ಕೂತೂಹಲವಾಗಿದೆ.
ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆರಂಭಕ್ಕೂ ಮೊದಲು ಅಂದರೆ 2 ವಾರಗಳು ಮುಂಚೆಯೇ ಬರ ಪ್ರವಾಸ ಹಮ್ಮಿಕೊಳ್ಳಲು ಯಡಿಯೂರಪ್ಪ ನಿರ್ದರಿಸಿದ್ದಾರೆ.
ಜೂನೇ 7ರಿಂದ ಜೂನ್ 10ರ ವರೆಗೆ ಬರ  ಪರಿಶೀಲನಾ ಪ್ರವಾಸದಲ್ಲಿ ಯಡಿಯೂರಪ್ಪ ಪಾಲ್ಗೋಳ್ಳಲಿದ್ಜಾರೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಕಟಿಸಲಾಗಿದೆ. 
ಇನ್ನೂ ಸಿದ್ದರಾಮಯ್ಯ ಶಾಸಕರಾಗಿರುವ ಆಯ್ಕೆಯಾಗದಿರುವ ಬಾದಾಮಿ ಕ್ಷೇತ್ರಕ್ಕೂ ಯಡಿಯೂರಪ್ಪ ಮೊದಲು ಭೇಟಿ  ನೀಡಲಿದ್ದಾರೆ, ಅದಾದ ನಂತರ ಹುನಗುಂದ, ಕೊಪ್ಪಳ, ಲಿಂಗಸಗೂರು, ಮತ್ತು ಯಾದಗಿರಿಗಳಲ್ಲಿ ಪ್ರವಾಸ ಮಾಡುವ ಯಡಿಯೂರಪ್ಪ ಗುರುಮಿಟ್ಕಲ್ ನಲ್ಲಿ  ಪ್ರವಾಸ ಕೊನೆಗೊಳಿಸಲಿದ್ದಾರೆ. 
ಜನರಿಗೆ ಸರ್ಕಾರದ ಬಗ್ಗೆ   ಅಸಮಾಧಾನ ಹೆಚ್ಚಾಗುತ್ತಿದೆ  ಎಂಬುದನ್ನು ಅರಿತಿರುವ ಬಿಜೆಪಿ ಇದೇ ಒಳ್ಳೆಯ ಸಮಯ ಎಂದು ಭಾವಿಸಿ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಲು ಮುಂದಾಗಿದೆ ಎಂದು ಬಿಜೆಪಿ ನಾಯಕರು ನಾಯಕರೊಬ್ಬರು ತಿಳಿಸಿದ್ದಾರೆ. 
ಸರ್ಕಾರದ ಮೇಲೆ ಒತ್ತಡ ಹೆಚ್ಚಿದರೆ ಸಾರ್ವಜನಿಕರ ಅನುಕಂಪವೂ ಸಿಗಲಿದೆ ಎಂಬ ಲೆಕ್ಕಚಾರದ ಮೇಲೆ ಸರ್ಕಾರದ  ವೈಫಲ್ಯಗಳನ್ನು ಮುಂದಿಟ್ಟುಕೊಂಡು  ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು  ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ. 
ಜೆಡಿಎಸ್  ಪಕ್ಷದಲ್ಲೂ ಅಸಮಾಧಾನ ಹೆಚ್ಚಾಗುತ್ತಿದೆ, ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ  ಹೆಚ್ಚಾಗುತ್ತಿದೆ. ಇದನ್ನು  ಮನಗಂಡಿದೆ. ಕಾಂಗ್ರೆಸ್ ಶಾಸಕಾಂಗ  ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಘಟಕದ ಅದ್ಯಕ್ಷ ದಿನೇಶ್ ಗುಂಡೂರಾವ್ ಅಷ್ಟೆ ಏಕೆ? ಪಕ್ಷದ ರಾಜ್ಯ  ಉಸ್ತವಾರಿ ವಹಿಸಿರುವ ಕೆ. ಸಿ ವೇಣುಗೋಪಾಲ್ ಅವರನ್ನು  ಬಾಯಿಗೆ ಬಂದ ರೀತಿಯಲ್ಲಿ ಅವರ ಪಕ್ಷದ ನಾಯಕರೇ  ನಿಂದನೆ  ಮಾಡುತ್ತಿದ್ದರೂ ಅಂತಹ ನಾಯಕರ ವಿರುದ್ದ ಕ್ರಮ ಜರುಗಿಸಲು ಸಾಧ್ಯವಾಗದೇ ತನ್ನ  ಮಾನವನ್ನು ತಾನೇ  ಕಳೆದುಕೊಳ್ಳುತ್ತಿದೆ,   ಜೆಡಿಎಸ್ ಪಕ್ಷ ದ  ಜೊತೆ ತರಾತುರಿಯಲ್ಲಿ ಮಾಡಿಕೊಂಡ ಮೈತ್ರಿ ಈಗ ಅಪಹಾಸ್ಯಕ್ಕೆ  ಗುರಿಯಾಗುವಂತೆ ಮಾಡಿದೆ . 
ಇಂತಹ ಅವಕಾಶವನ್ನು ರಾಜಕೀಯವಾಗಿ  ಬಳಕೆ ಮಾಡಿಕೊಳ್ಳಲು ಬಿಜೆಪಿ ಈಗ ರಾಜ್ಯ  ಸರ್ಕಾರದ  ವೈಫಲ್ಯಗಳನ್ನು  ಮುಂದಿಟ್ಟುಕೊಂಡು  ಒತ್ತಡ ಹಾಕಲು  ಮುಂದಾಗಿದೆ.
SCROLL FOR NEXT