ರಾಜಕೀಯ

ರಾಜ್ಯ ಕಾಂಗ್ರೆಸ್ ಬಿಕ್ಕಟ್ಟು: ಶತಾಯಗತಾಯ ನಾಯಕತ್ವ ಬದಲಾವಣೆಗೆ ಭಿನ್ನರ ಪಟ್ಟು?

Shilpa D
ಬೆಂಗಳೂರು: ರಾಜಕೀಯದಲ್ಲಿ ಅಧಿಕಾರ ಹೊಂದಿರುವವರು ಅಧಿಕಾರ ಇಲ್ಲದವರ ಬಗ್ಗೆ ಗಮನ ಹರಿಸಬೇಕು.  ಇಲ್ಲವೇ ಅಧಿಕಾರ ಹಂಚಿಕೊಳ್ಳಬೇಕು, ಇದ್ಯಾವುದು ಆಗದಿದ್ದಾಗ ಈ ರೀತಿಯ ವೈರುಧ್ಯಗಳು ಹುಟ್ಟಿಕೊಳ್ಳುತ್ತವೆ, ಎಂದು  ರಾಜ್ಯ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಹಿರಿಯ ನಾಯಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಕಾಂಗ್ರೆಸ್ ತನ್ನ ಖೋಟಾದಲ್ಲಿ ಬಾಕಿ ಉಳಿದಿರುವ ಕಾತೆಗಳನ್ನು ತುಂಬಲು ಹಿಂದೇಟು ಹಾಕುತ್ತಿದೆ.ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಪಕ್ಷೇತರ ಅಭ್ಯರ್ಥಿಗಳಿಗೆ ಮಾತ್ರ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ,  ಇಲ್ಲೂ ಕೂಡ ಅಸಮಾಧಾನಿತ ಕಾಂಗ್ರೆಸ್ ಶಾಸಕರನ್ನು ಕೈ ಬಿಡಲಾಗುತ್ತಿದೆ.
ಜೊತೆಗೆ  ಅಗತ್ಯ ಬಿದ್ದರೇ ರಾಜ್ಯಮಟ್ಟದಲ್ಲಿ  ಕಾಂಗ್ರೆಸ್ ನಾಯಕತ್ವ ಬದಲಾವಣೆಗೂ ಚಿಂತನೆ ನಡೆಸಲಾಗುತ್ತಿದೆ. 
ಸದ್ಯ ಕಾಂಗ್ರೆಸ್ ನಲ್ಲಿ ಯಾವುದೇ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ,  ರಾಜ್ಯ ನಾಯ.ಕರೇ ಎಲ್ಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ,   ಇವರ ನಿರ್ಧಾರಗಳು ತರ್ಕವಿಲ್ಲದ್ದು ಹಾಗೂ ಸಾಮಾಜಿನ ಅನ್ಯಾಯದಿಂದ ಕೂಡಿದ್ದು, ಇವರಪ  ಆಟಗಳನ್ನು ನೋಡಿ ನೋಡಿ ನನಗೆ ಸಾಕಾಗಿದೆ ಎಂದು ಸಚಿವ ಸ್ಥಾನದ ಆಕಾಂಕ್ಷಿಯಾದ ಹಿರೇಕೆರೂರು ಶಾಸಕ ಬಿ,ಸಿ ಪಾಟೀಲ್ ಹೇಳಿದ್ದಾರೆ.
ಆದರೆ ಹಿರಿಯ ಕಾಂಗ್ರೆಸ್ ನಾಯಕರುಗಳಾದ ರಾಮಲಿಂಗಾ ರೆಡ್ಡಿ. ಸಚಿವ ಸ್ಥಾನ ಸಿಗುವುದೆಂಬ ನಂಬಿಕೆಯಲ್ಲಿದ್ದರೇ. ರಮೇಶ್ ಜಾರಕಿಹೊಳಿ ಮತ್ತು ರೋಷನ್ ಬೇಗ್ ಅವರುಗಳು ಸಂಪುಟ ಸೇರುವ ಆಸೆ ಕೈ ಬಿಟ್ಟಿದ್ದಾರೆ. 
ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್  ಪುನಾಕಚಣೆ ಆಗುವ ಅವಶ್ಯಕತೆಯಿದೆ, . ರಾಜ್ಯ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ನಡೆಯುತ್ತಿದೆ, ತಮ್ಮ ಮೆಚ್ಚಿನವರಿಗೆ ಹಾಗೂ ಬೇಕಾದವರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ, ದಶಕಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಇದರಿಂದ ನಿರಾಶೆಯಾಗಿದೆ, ಹೊರಗಿನಿಂದ ಬಂದ ಜಮೀರ್ ಅಹ್ಮದ್ ಅಂತವರಿಗೆ ಮಣೆ ಹಾಕಲಾಗುತ್ತಿದೆ,  ಪಕ್ಷಕ್ಕಾಗಿ ದುಪಡಿದವರನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಶಾಸಕರೊಬ್ಬರು ತಿಳಿಸಿದ್ದಾರೆ. 
SCROLL FOR NEXT