ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ: ರಾಜಕೀಯ ಕುತೂಹಲಕ್ಕೆ ರೆಕ್ಕೆಪುಕ್ಕ!

Sumana Upadhyaya
ಬೆಂಗಳೂರು: ಸಿಎಂ ಹೆಚ್ ಡಿ ಕುಮಾರಸ್ವಾಮಿ ಲೋಕಸಭೆಯ ಮಾಜಿ ಪ್ರತಿಪಕ್ಷದ ನಾಯಕ, ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ಬೆಂಗಳೂರಿನಲ್ಲಿ ಅವರ ನಿವಾಸದಲ್ಲಿ ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. 
ಕಳೆದ ರಾತ್ರಿ ಸಿಎಂ ಖರ್ಗೆಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸುಮಾರು 1 ಗಂಟೆ ಕಾಲ ಮಾತುಕತೆ ನಡೆಸಿದರು.  ಇದೊಂದು ಸೌಹಾರ್ದಯುತ ಭೇಟಿಯಷ್ಟೆ ಎಂದು ಖರ್ಗೆ ಹೇಳಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಲ್ಲಿಕಾರ್ಜುನ ಖರ್ಗೆಯವರ ಮಾಜಿ ಕ್ಷೇತ್ರ ಗುರುಮಿಟ್ಕಲ್ ನಲ್ಲಿ ನಾಳೆ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ಆದರೆ ರಾಜಕೀಯ ಪಂಡಿತರು ಲೆಕ್ಕಾಚಾರ, ಊಹೆ ಮಾಡುವ ಪ್ರಕಾರ ಸಿಎಂ ಭೇಟಿಯ ಹಿಂದೆ ಹಲವು ಉದ್ದೇಶಗಳು ಅಡಗಿದ್ದವು. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರುಗಳ ಸರಮಾಲೆಯನ್ನೇ ಹೊತ್ತು ತಂದಿದ್ದಾರೆ. ಇಬ್ಬರೂ ತಮ್ಮ ಸಾಮಾನ್ಯ ಶತ್ರು ಸಿದ್ದರಾಮಯ್ಯನವರನ್ನು ಹೇಗೆ ಮಣಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾತುಕತೆ ನಡೆಸಿರಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. 
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಖರ್ಗೆ ಮತ್ತು ಕುಮಾರಸ್ವಾಮಿಯವರು ಗುಲ್ಬರ್ಗದಲ್ಲಿ ಭೇಟಿಯಾಗಿದ್ದರು. ಆಗ ಅಲ್ಲಿ ಖರ್ಗೆಯವರಿಗೆ ಮುಖ್ಯಮಂತ್ರಿ ಪದವಿ ನಿರಾಕರಿಸಿದ್ದು ಮತ್ತು ದಲಿತ ಮುಖ್ಯಮಂತ್ರಿ ವಿಚಾರಗಳು ಪ್ರಸ್ತಾಪವಾಗಿದ್ದವು. ಅವರಿಬ್ಬರ ಭೇಟಿ ಸಿದ್ದರಾಮಯ್ಯನವರಿಗೆ ಹಿಡಿಸಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು.
SCROLL FOR NEXT