ರಾಜಕೀಯ

ಕಾಂಗ್ರೆಸ್ ಪಕ್ಷವೇ ಮರೆತು ನಿರ್ಲಕ್ಷ್ಯಿಸಿರುವ ಈ ಮಾಜಿ ಪ್ರಧಾನಿಯನ್ನು ಸಿದ್ದರಾಮಯ್ಯ ಮಾತ್ರ ಸ್ಮರಿಸಲು ಕಾರಣವೇನು?

Shilpa D
ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ವಿ.ಪಿ ಸಿಂಗ್ ಅವರ ಬಗ್ಗೆ  ಕಾಂಗ್ರೆಸ್ ಪಕ್ಷ  ತೀರಾ ನಿರ್ಲಕ್ಷ್ಯ ತಾಳಿದೆ, ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ವಿ,ಪಿ ಸಿಂಗ್ ಅವರ 88ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಅವರನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.
ವಿ.ಪಿ ಸಿಂಗ್ ಅವರು ಹಿಂದುಳಿ ವರ್ಗದ ನಾಯಕರೆಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಸ್ಮರಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ವಿ.ಪಿ ಸಿಂಗ್ 1931 ಜೂನ್ 25ರಂದು ಜನಿಸಿದ್ದರು. 
ಸಿದ್ದರಾಮಯ್ಯಸ ಮಾಜಿ ಸಿಎಂ ದೇವರಾಜ ಅರಸ್ ಅವರನ್ನು ಹೊಗಳಿ ಕೊಂಡಾಡಿದ್ದರು. ದೇಶದ ಸಾಮಾಜಿಕ/ ರಾಜಕೀಯ ಕ್ಷೇತ್ರಗಳಲ್ಲಿ ಪರಿವರ್ತನೆಯ ಹೊಸ ಶಖೆಗೆ ಕಾರಣರಾದ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರನ್ನು ಅವರ ಹುಟ್ಟುಹಬ್ಬದ ದಿನವಾದ ಇಂದು ಗೌರವದಿಂದ ನೆನೆಯುತ್ತೇನೆ.
ಮಂಡಲ್ ವರದಿ ಜಾರಿಗೊಳಿಸಿ ಹಿಂದುಳಿದ ವರ್ಗವನ್ನು ರಾಜಕೀಯ ಮತ್ತು ಆರ್ಥಿಕವಾಗಿ ಬಲಗೊಳಿಸಿದ ನಾಯಕ‌‌ ಈ ಮಹಾರಾಜ ಎಂದು ಟ್ವೀಟ್ ಮಾಡಿದ್ದಾರೆ.
ವಿ.ಪಿ ಸಿಂಗ್ ಮಂಡಲ ರಾಜಕೀಯದ ಪಿತಾಮಹ, ಸಿದ್ದರಾಮಯ್ಯ ಅವರು ಅಹಿಂದ ಮಂತ್ರ ಪಠಿಸುವ ನಾಯಕರಾಗಿದ್ದಾರೆ. ಇಬ್ಬರು ಕೂಡ ಹಿಂದುಳಿದ ವರ್ಗದವರಾಗಿದ್ದು, ಇಬ್ಬರು ಒಂದೇ ರೀತಿಯ ರಾಜಕೀಯ ಅನುಸರಿಸಿಕೊಂಡು ಬಂದಿದ್ದಾರೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
SCROLL FOR NEXT