ಬಚ್ಚೇಗೌಡ 
ರಾಜಕೀಯ

ನಾಡ ಪ್ರಭು ಕೆಂಪೇಗೌಡರ ವಂಶಸ್ಥ ಬಚ್ಚೇಗೌಡರ ಮೊದಲ ಪ್ರಾಶಸ್ತ್ಯ ಸ್ವಚ್ಚ ಕುಡಿಯುವ ನೀರು!

ಸಂಸದ ಬಿಎನ್ ಬಚ್ಚೇಗೌಡರ ಮೊದಲ ಹಾಗೂ ಅತ್ಯಂತ ಹೆಚ್ಚಿನ ಆದ್ಯತೆ ಕ್ಷೇತ್ರದ ನೀರಿನ ಸಮಸ್ಯೆ ಬಗೆಹರಿಸುವುದಾಗಿದೆ. ಈ ಒಣ ಭೂಮಿಯಲ್ಲಿ ಯಾವುದೇ ...

ಚಿಕ್ಕಬಳ್ಳಾಪುರ: ಸಂಸದ ಬಿಎನ್ ಬಚ್ಚೇಗೌಡರ ಮೊದಲ ಹಾಗೂ ಅತ್ಯಂತ ಹೆಚ್ಚಿನ ಆದ್ಯತೆ ಕ್ಷೇತ್ರದ ನೀರಿನ ಸಮಸ್ಯೆ ಬಗೆಹರಿಸುವುದಾಗಿದೆ. ಈ ಒಣ ಭೂಮಿಯಲ್ಲಿ ಯಾವುದೇ ದೀರ್ಘಕಾಲಿಕ ನದಿಯಿಲ್ಲ, ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ಇಡೀ ಚಿಕ್ಕಬಳ್ಳಾಪುರ ನೀರಿಗಾಗಿ  ಕೆರೆ ಮತ್ತು ಬೋರ್ ವೆಲ್ ಹಾಗೂ ಮಳೆಯನ್ನು ನೆಚ್ಚಿಕೊಂಡಿದೆ.
ತಾವು ಬೆಂಗಳೂರು ಸಂಸ್ಥಾಪಕ ಕೆಂಪೇಗೌಡ ಅವರ ವಂಶಸ್ಥರು ಎಂದು ಹೇಳಿಕೊಳ್ಳುವ ಬಚ್ಚೇಗೌಡ ತಮ್ಮ ಹಿರಿಯರು ಸ್ಥಾಪಿಸಿರುವ ಕೆರೆಗಳನ್ನು ತುಂಬಿಸಲು ಪ್ರಯತ್ನಿಸುತ್ತಿದ್ದಾರೆ, ಹಲವ ವರ್ಷಗಳಿಂದ ಮುಂಗಾರು  ಕೊರತೆಯಿಂದಾಗಿ ಅಂತರ್ಜಲದ ನೀರಿನ ಮಟ್ಟ ತಳ ತಲುಪಿದೆ 1,200 ರಿಂದ 1,500 ಅಡಿ ಕೊರೆದರೂ ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿಲ್ಲ, ಕೆಲ ಪ್ರದೇಶಗಳಲ್ಲಿ ಜನರು ಫ್ಲೋರೈಡ್ ಯುಕ್ತ ನೀರನ್ನು ಬಲವಂತವಾಗಿ ಕುಡಿಯುತ್ತಿದ್ದಾರೆ, ಹೀಗಾಗಿ ಜನರಿಗೆ ಶುದ್ದ ನೀರು ಕೊಡುವುದೇ ಬಚ್ಚೇಗೌಡರ ಪ್ರಥಮ ಪ್ರಾಶಸ್ತ್ಯವಾಗಿದೆ.
ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ಬಚ್ಚೇಗೌಡ ಹೊಸಕೋಟೆ ಶಾಸಕರಾಗಿದ್ದರು.ಈ ಸಮಯದಲ್ಲೇ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಭೂ ಸ್ವಾಧೀನ ಸೇರಿದಂತೆ ಹಲವು ಕಾರಣಗಳಿಂದಾಗಿ ಯೋಜನೆ ನಿಗಧಿತ ಸಮಯದಲ್ಲಿ ಪೂರ್ಣಗೊಳ್ಳಲಿಲ್ಲ, ಸದ್ಯ ಎಲ್ಲಾ ಅಡ್ಜಿ ಆತಂಕಗಳು ದೂರವಾಗಿವೆ,ರಾಷ್ಚ್ರೀಯ ಹಸಿರು ನ್ಯಾಯಮಂಡಳಿ ಕೂಡ ಪಾಸಿಟಿವ್ ಆರ್ಡರ್ ನೀಡಿದೆ, ಹೀಗಾಗಿ ಎತ್ತಿನ ಹೊಳೆ ಯೋಜನೆಗೆ ತಾವು ಪೂರ್ಣ ಪ್ರಮಾಣದಲ್ಲಿ ದುಡಿಯುವುದಾಗಿ ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಪರಿಚಿತರಾಗಿರುವ ಬಚ್ಚೇಗೌಡ ವಿರೋಧಿಗಳ ಬಗ್ಗೆ ಯಾವುದೇ ರೀತಿ ತಲೆಕೆಡಿಸಿಕೊಳ್ಳುವುದಿಲ್ಲ, ಅವರ 40 ವರ್ಷಗಳ ರಾಜಕೀಯ ಜೀವನ ಹಲವು ಏರಿಳಿತಗಳಿಂದ ಕೂಡಿದೆ, 1970ರ ದಶಕದಿಂದಲೂ ಬಚ್ಚೇಗೌಡರು ರಾಜಕಾರಣದಲ್ಲಿದ್ದಾರೆ.
ನೀರಿನ ಸಮಸ್ಯೆ ಹೊರತು ಪಡಿಸಿದರೇ  ವಿವಿಧ ಜಿಲ್ಲೆಗಳ ಜೊತೆಗೆ ಉಪ ರೈಲು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ, ಕೇಂದ್ರ ರೈಲ್ವೆ ಸಚಿವರುಗಳಾದ ಪಿಯೂಷ್ ಗೋಯೆಲ್ ಮತ್ತು ಸುರೇಶ್ ಅಂಗಡಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ, ಉನಗರ ರೈಲ್ವೆಯು ದೇವನಹಳ್ಳಿ- ಚಿಕ್ಕಬಳ್ಳಾಪುರ, ಕುಣಿಗಲ್-ತುಮಕೂರು, ಬೆಂಗಳೂರು- ಹೊಸೂರು, ಚಿಕ್ಕಬಳ್ಳಾಪುರ-ಕುಣಿಗಲ್, -ತುಮಕೂರು ಸೇರಿದಂತೆ ಹಲವು ತಾಲೂಕುಗಳಿಗೆ ವಿಸ್ತರಿಸಲಿದೆ.
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರ, ಹಾಗೂ ಬೆಂಗಳೂರು ಗ್ರಾಮಾಂತರದ 4 ವಿಧಾನಸಭೆ ಕ್ಷೇತ್ರ ಮತ್ತು ಯಲಹಂಕ ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಯ ಯಾವೊಬ್ಬ ಶಾಸಕರಿಲ್ಲ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರನ್ನು ಬಚ್ಚೇಗೌಡ 1,82 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ,
ಹೊಸಕೋಟೆ ವಿಧಾನಸಭೆಯಿಂದ 8 ಬಾರಿ ಸ್ಪರ್ಧಿಸಿ ಐದು ಬಾರಿ ಗೆದ್ದಿದ್ದಾರೆ, ವಿವಿಧ  ಇಲಾಖೆಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

SCROLL FOR NEXT