ರಾಜಕೀಯ

ಚುನಾವಣಾ ಫಲಿತಾಂಶದ ಕುರಿತ ಚರ್ಚೆಯಿಂದ ಹಾನಿಯಿಲ್ಲ: ಸಿದ್ದರಾಮಯ್ಯ

Raghavendra Adiga
ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದು ತಿಂಗಳಾದರೂ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನ ಕುರಿತ ವೈವಿದ್ಯಮಯ ಪ್ರತಿಕ್ರಿಯೆ ಬರುವುದು ನಿಂತಿಲ್ಲ. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಟ್ವೀಟ್ ಮಾಡಿದ್ದು   ಚುನಾವಣಾ ಫಲಿತಾಂಶವು ಇಂದಿಗೂ "ನಿಗೂಢ ರಹಸ್ಯ"ವಾಗಿ ಮುಂದುವರಿದಿದೆ ಎಂದಿರುವುದು ಇದಕ್ಕೊಂದು ನಿದರ್ಶನ. ಆದರೆ ಇದೇ ವೇಳೆ ಫಲಿತಾಂಶದ ಕುರಿತು ಚರ್ಚಿಸುವುದರಲ್ಲಿ ಯಾವುದೇ ಹಾನಿ ಕಾಣುವುದಿಲ್ಲ ಎಂದೂ ಹೇಳಿದ್ದಾರೆ. 
"ನಾವು ಮಾಡಿದ್ದಕ್ಕಾಗಿ ಕ್ರೆಡಿಟ್ ಪಡೆಯುವಲ್ಲಿ ಯಾವುದೇ ತಪ್ಪಿಲ್ಲ. ಬಿಜೆಪಿ ಭಾರತವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಂತೆ ವಿಭಜಿಸುತ್ತಿದೆ ”ಎಂದು ಸಿದ್ದರಾಮಯ್ಯ ಹೇಳಿದರು.
ಬುಧವಾರ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮಗ್ರಾಮವಾಸ್ತವ್ಯದಲ್ಲಿದ್ದಾಗ  "ನೀವು ಮೋದಿಗೆ ಮತ ಹಾಕುತ್ತೀರಿ ಆದರೆ ಕೆಲಸಕ್ಕಾಗಿ ನಮ್ಮ ಬಳಿ ಬರ್ತೀರಿ" ಎಂದು ಕಿಡಿಕಾರಿದ್ದರು. ಗುರುವಾರ ಸಿದ್ದರಾಮಯ್ಯ ಸಹ ಇದನ್ನೇ ಅನುಸರಿಸಿದ್ದಾರೆ. 
"ನಾವು ನಿಮಗೆ ಅಕ್ಕಿ, ಬಟ್ಟೆ, ಹಾಲು, ಶಾಲೆ ನೀಡುತ್ತೇವೆ ಪಠ್ಯ ಪುಸ್ತಕಗಳು, ಶಾಲಾ ಸಮವಸ್ತ್ರ, ರೈತರಿಗೆ ನೀರು, ಎಲ್ಲ ಕೊಡುತ್ತೇವೆ.  ಅನೇಕ ಕಲ್ಯಾಣ ಯೋಜನೆಗಳನ್ನು ಮಾಡಿ,ಯೂ ನೀವು ನೀವು ಬಿಜೆಪಿಗೆ ಮತ ಹಾಕಿದ್ದೀರಿ. ”
ಶುಕ್ರವಾರ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, “ನೀವು ಯಾರಿಗೆ ಮತ ಹಾಕಿದ್ದೀರಿ ಎಂದು ಯಾರಿಗೆ ಗೊತ್ತು?” ಎಂದು ಪ್ರಶ್ನಿಸಿದ್ದಾರೆ.  ಪರಮೇಶ್ವರ ಅವರ ಹೇಳಿಕೆಯು ಕಾಂಗ್ರೆಸ್‌ನಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಸೂಚಿಸುತ್ತದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದು “ಕಾಂಗ್ರೆಸ್ ಪಕ್ಷವು ಕೇವಲ ಒಂದು ಸ್ಥಾನವನ್ನು ಗೆದ್ದಿದೆ. ಈ ಬಗೆಯ ಸೋಲು, ಜನರ ಆದೇಶವನ್ನು ‘ವಿವರಿಸಲಾಗದಂತೆ’ ಮಾಡಿದೆ. " ಎಂದಿದ್ದಾರೆ. ಒಟ್ಟಾರೆ  ಬಿಜೆಪಿ ವಿರುದ್ಧದ ಈ ಆಕ್ರೋಶದಿಂದ ಕಾಂಗ್ರೆಸ್ ನಾಯಕರು ದಿನಕ್ಕೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
SCROLL FOR NEXT