ರಾಜಕೀಯ

ಕಾರ್ಗಿಲ್ ಯುದ್ದ ಗೆದ್ದ ನಂತರ ಇಂಡಿಯಾ ಶೈನಿಂಗ್ ಅಂದರು, ಆದರೂ ವಾಜಪೇಯಿ ಸೋತಿದ್ಯಾಕೆ?

Shilpa D
ಹಾಸನ: ಭಾರತ ಮತ್ತು ಪಾಕಿಸ್ತಾನ ನಡುವೆ ಏರ್ಪಟ್ಟಿರುವ ಉದ್ವಿಘ್ನ ಪರಿಸ್ಥಿತಿ ಸುಧಾರಿಸಲು ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವುದು ಸೂಕ್ತ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸಲಹೆ ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ನಾಯಕರುಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವುದನ್ನು ಬಿಟ್ಟು. ಪರಿಸ್ಥಿತಿ ಹತೋಟಿಗೆ ತರುವತ್ತ ಪ್ರಯತ್ನ ಮಾಡಬೇಕು. ದ್ವಿಪಕ್ಷೀಯ ಮಾತುಕತೆಗಳಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.,
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡರು, ವಿರೋಧ ಪಕ್ಷಗಳನ್ನು ಬೈಯ್ಯುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ, ವಿರೋಧ ಪಕ್ಷದ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು,  ಇಲ್ಲದಿದ್ದರೇ ಭಾರತದ ರಾಜಕೀಯದ ಲಾಭ ಪಡೆದುಕೊಳ್ಳಲು ಪಾಕಿಸ್ತಾನ ಯತ್ನಿಸುತ್ತದೆ ಎಂದು ಹೇಳಿದ್ದಾರೆ, 
ವಿರೋಧ ಪಕ್ಷದವರನ್ನು ಬೈಯ್ಯುವುದಕ್ಕೋಸ್ಕರ ಜನ ನಿಮ್ಮನ್ನು ಆರಿಸಿ ಕಳಿಸಿಲ್ಲ, ಕಳೆದ ಚುನಾವಣೆಯಲ್ಲಿ ಮೋದಿ ಅವರಿಗೆ ದೇಶದ ಜನ 282 ಕ್ಷೇತ್ರವನ್ನು ಗೆಲ್ಲಿಸುವ ಮೂಲಕ ಬಹುಮತ ಕೊಟ್ಟರು. ನಾಲ್ಕೂ ಮುಕ್ಕಾಲು ವರ್ಷದ ಆಡಳಿತದಲ್ಲಿ ಕಾಶ್ಮೀರದಲ್ಲಿ ಮೂರು ಸರ್ಕಾರ ಬದಲಾಯಿತು. ರಾಜ್ಯಪಾಲರ ಆಡಳಿತ ಜಾರಿಯಾಯಿತು. ಮೂರೂವರೆ ವರ್ಷ 144 ನಿಷೇಧಾಜ್ಞೆ ಜಾರಿಯಾಗಿತ್ತು. ಇದೆಲ್ಲ ಮೋದಿಯವರ ಸ್ಟೈಲ್‌ ಆಫ್‌ ಫಂಕ್ಷನ್‌ ಇರಬಹುದು,' ಎಂದು ಟೀಕಿಸಿದರು. 
ವೈಮಾನಿಕ  ದಾಳಿ ನಂತರ ಮೋದಿ ಪರ ಅಲೆ ಹೆಚ್ಚಾಗಿದೆ ಎಂಬ ಬಿಎಸ್‌ವೈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲಾರೆ. ಆದರೆ ಕಾರ್ಗಿಲ್‌ ಯುದ್ಧದಲ್ಲಿ ಗೆದ್ದ ನಂತರವೂ ಇಂಡಿಯಾ ಶೈನಿಂಗ್‌ ಅಂದ್ರು, ನಂತರ ನಡೆದ ಚುನಾವಣೆಯಲ್ಲಿ ವಾಜಪೇಯಿ ಏಕೆ ಸೋತರು ಎಂದು ಪ್ರಶ್ನಿಸಿದ್ದಾರೆ.
SCROLL FOR NEXT