ರಾಜಕೀಯ

ಜಾಧವ್ ಗೆ ಕಲಬುರಗಿ ಜನ ಸೂಕ್ತ ಉತ್ತರ ನೀಡುತ್ತಾರೆ: ಪ್ರಿಯಾಂಕ್ ಖರ್ಗೆ

Lingaraj Badiger
ಬೆಂಗಳೂರು: ಕಲಬುರಗಿಗೆ ಬಂದು ಯಾರೇ ರಾಜಕೀಯ ಮಾಡಿದರೂ ತೀರ್ಪು ಕೊಡುವವರು ಕ್ಷೇತ್ರದ ಜನತೆ. ಡಾ.ಉಮೇಶ್ ಜಾಧವ್ ಆಪರೇಷನ್ ಕಮಲಕ್ಕೆ ಮಾರಾಟವಾಗಿದ್ದು, ತಮ್ಮ ಮೇಲೆ ಕುಂಟು ನೆಪ ಹೇಳಿದ್ದಾರೆಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಇಂದು ಸೆವೆನ್ ಮಿನಿಸ್ಟರ್ ಕ್ಯಾಟ್ರಸ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರು ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸ್ವಭಾವತಃ ಅವರ ಮೇಲೆ ಪ್ರಧಾನಿ ಮೋದಿ ಅವರ ಕಣ್ಣಿಟ್ಟಿರಬಹುದು. ಕಲಬುರಗಿಗೆ ಪ್ರಧಾನಿ ಬಂದು ರಾಜಕೀಯ ಮಾಡಿದರೂ ತೀರ್ಪು ಕೊಡುವವರು ಕ್ಷೇತ್ರ ಜನತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲಿಗೂ ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿಲ್ಲ. ತಮ್ಮ ಜನಪರ ಕಾರ್ಯಗಳಿಂದ ಹಿಂದೆ ಸರಿದವರೂ ಅಲ್ಲ. 11 ಆಗಿದೆ ಇದು ತಮ್ಮ 12ನೇ ಚುನಾವಣೆ ಎಂದಿದ್ದಾರೆ.
ಉಮೇಶ್ ಜಾಧವ್ ತಮ್ಮ ಮೇಲೆ ಕುಂಟು ನೆಪಗಳನ್ನು ಹೇಳಿದ್ದಾರೆ. ಆಪರೇಷನ್ ಕಮಲಕ್ಕೆ ಒಳಗಾಗಿ ಮಾರಾಟವಾಗಿರುವ ಜಾಧವ್ ಅದನ್ನು ಮರೆ ಮಾಚಲು ಹೀಗೆಲ್ಲಾ ಆರೋಪ ಮಾಡುತ್ತಿದ್ದಾರೆ. ಈ ಚುನಾವಣೆಯನ್ನು ಗಂಭೀರವಾರಿ ಪರಿಗಣಿಸಿದ್ದೇವೆ. ಎಲ್ಲದಕ್ಕೂ ಕ್ಷೇತ್ರದ ಜನತೆ ಉತ್ತರ ನೀಡಲಿದ್ದಾರೆ ಎಂದು ಪ್ರಿಯಾಂಕ ಖರ್ಗೆ ಹೇಳಿದರು.
SCROLL FOR NEXT