ಶೋಭಾ ಕರಂದ್ಲಾಜೆ 
ರಾಜಕೀಯ

ಸುಮಲತಾ ವಿರುದ್ಧ ಹೇಳಿಕೆ ನೀಡಿರುವ ಸಚಿವ ರೇವಣ್ಣ ಬೇಷರತ್ ಕ್ಷಮೆ ಕೇಳಬೇಕು: ಶೋಭಾ ಕರಂದ್ಲಾಜೆ

ಮಹಿಳಾ ದಿನಾಚರಣಯ ದಿನವೇ ಮಾಜಿ ಸಚಿವ ಚಿತ್ರನಟ ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ...

ಉಡುಪಿ: ಮಹಿಳಾ ದಿನಾಚರಣಯ ದಿನವೇ ಮಾಜಿ ಸಚಿವ ಚಿತ್ರನಟ ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರ ಅಕ್ಷಮ್ಯ ಅಪರಾಧ, ಅವರು ಕೂಡಲೇ ಈ ಕುರಿತು ಸುಮಲತಾ ಅವರ ಬಳಿ ಕ್ಷಮೆಯಾಚಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ,
ನಿನ್ನೆ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಡ ಸತ್ತ ಬಳಿಕ ಅವರ ಪತ್ನಿ ರಾಜಕೀಯಕ್ಕೆ ಬರಬಾರದು ಎಂದು ಈ ದೇಶದಲ್ಲಿ ಕಾನೂನು ಇಲ್ಲ. ಅಥವಾ ಗಂಡ ಸತ್ತು ಇಷ್ಟು ಸಮಯದವರೆಗೆ ರಾಜಕೀಯಕ್ಕೆ ಬರಬಾರದು, ಇಷ್ಟು ಸಮಯ ಕಳೆದ ನಂತರವಷ್ಟೇ ರಾಜಕೀಯಕ್ಕೆ ಕಾಲಿಡಬೇಕು ಎಂಬ ನಿಯಮಗಳಿಲ್ಲ. ಈ ರೀತಿ ಮಹಿಳೆಯರ ಬಗ್ಗೆ ಸಚಿವ ರೇವಣ್ಣ ಕೀಳುಮಟ್ಟದ ಹೇಳಿಕೆ ನೀಡಬಾರದು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ. ಆದರೆ ಅವರು ಆಡಿರುವ ಮಾತು ಸರಿಯಲ್ಲ, ಹೀಗಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಟೀಕೆ ಮಾಡುವುದು ಸರಿಯಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ