ರಾಜಕೀಯ

ಬಂಡಾಯ ಶಾಸಕರನ್ನು ಸಭೆಗೆ ಕರೆದಿದ್ದ ಸ್ಪೀಕರ್ ರಮೇಶ್ ಕುಮಾರ್ ಸ್ವತಃ ಗೈರು

Sumana Upadhyaya
ಬೆಂಗಳೂರು: ಉಮೇಶ್ ಜಾಧವ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಬಿ ನಾಗೇಂದ್ರ ನಾಲ್ವರು ಬಂಡಾಯ ಶಾಸಕರು ತಮ್ಮನ್ನು ಖುದ್ದಾಗಿ ಭೇಟಿ ಮಾಡಬೇಕು ಎಂದು ನಿನ್ನೆ ಗಡುವು ನೀಡಿದ್ದ ಸ್ಪೀಕರ್ ರಮೇಶ್ ಕುಮಾರ್ ಸ್ವತಃ ಸಭೆಗೆ ಗೈರಾಗಿದ್ದರು.
ಬಂಡಾಯ ಶಾಸಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ರಾಜೀನಾಮೆಯನ್ನು ಪ್ರಶ್ನಿಸಿ ಸ್ಪೀಕರ್ ಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಈ ನಾಲ್ವರು ಶಾಸಕರಿಗೆ ಸಮ್ಮನ್ಸ್ ಜಾರಿ ಮಾಡಲಾಗಿತ್ತು.
ಮಾರ್ಚ್ 7ರಂದು ಸ್ಪೀಕರ್ ನೊಟೀಸ್ ಜಾರಿ ಮಾಡಿದ್ದರು. ಉಮೇಶ್ ಜಾಧವ್ ಅವರು ಮಾರ್ಚ್ 4ರಂದು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾರ್ಚ್ 6ರಂದು ಬಿಜೆಪಿಗೆ ಸೇರಿದ್ದರು. ಆದರೆ ಅವರನ್ನು ಅನರ್ಹಗೊಳಿಸುವಂತೆ ಕೋರಿ ಫೆಬ್ರವರಿ 11ರಂದು ಅರ್ಜಿ ಸಲ್ಲಿಸಲಾಗಿತ್ತು.
SCROLL FOR NEXT