ರಾಜಕೀಯ

'ದೇವೇಗೌಡರ ಕುಟುಂಬದ ಕಣ್ಣೀರಿನಿಂದ ಪ್ರವಾಹ ಸಾಧ್ಯತೆ: ಮಂಡ್ಯ ಜನ ಸುರಕ್ಷಿತ ಸ್ಥಳಕ್ಕೆ ತೆರಳಿ'

Shilpa D
ಮೈಸೂರು: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ನಟಿ ಸುಮಲತಾ ವಿರುದ್ಧ  ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದ ನಂಚತರ ಸಾಮಾಜಿಕ ಮಾದ್ಯಮದಲ್ಲಿ ಗೋ ಬ್ಯಾಕ್ ನಿಖಿಲ್ ಎಂಬ ದೊಡ್ಡ ಡ್ರಾಮಾ ನಡೆಯಿತು. ನಿಖಿಲ್ ಟ್ರೋಲ್ ಗೊಳಗಾದರು.
ದೇವೇಗೌಡರ ಕುಟುಂಬ ರಾಜಕೀಯದ ಬಗ್ಗೆ ಹಲವು ಟೀಕೆ, ಟಿಪ್ಪಣಿ, ಹಾಸ್ಯ, ವ್ಯಂಗ್ಯ ಚುಚ್ಚು ಮಾತುಗಳು ಕೇಳಿ ಬಂದವು. ಫೇಸ್ ಬುಕ್ , ಟ್ವಿಟ್ಟರ್ ನಲ್ಲಿ ನಾನಾ ರೀತಿಯ ಜೋಕ್ ಗಳು ಹರಿದಾಡಿದವು. ಇನ್ನೂ ಸುಮಲತಾ ಅಂಬರೀಷ್ ಸ್ಪರ್ಧೆ ಖಚಿತವಾಗುತ್ತಿದ್ದಂತೆ, ಹಲವು ವಾಟ್ಸಾಪ್ ಗ್ರೂಪ್ ನಲ್ಲಿ ಗೌಡರ ಕುಟುಂಬದ ಬಗ್ಗೆ  ಹಾಸ್ಯಭರಿತ ಜೋಕ್ಸ್  ಹರಿದಾಡುತ್ತಿವೆ.
ಮೊಮ್ಮಗ ಪ್ರಜ್ವಲ್ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡರು  ಕಣ್ಣೀರು ಹಾಕಿದ್ದಾರೆ. 
ವಿಶೇಷವೆಂದರೆ, ದೇವೇಗೌಡರು ಮಾತ್ರವಲ್ಲದೇ ಅವರ ಇಡೀ ಕುಟುಂಬವೇ ಈ ಸಂದರ್ಭದಲ್ಲಿ ಕಣ್ಣೀರು ಹರಿಸಿದೆ. ದೇವೇಗೌಡರ ಕಣ್ಣೀರು ಬೆಂಬಲಿಗರನ್ನು ಭಾವುಕಗೊಳಿಸಿದರೆ, ಟ್ವಿಟರ್‌ನಲ್ಲಿ ಟ್ರೋಲ್‌ಗೆ ಗುರಿಯಾಗಿದೆ. ದೇವೇಗೌಡರ ಕುಟುಂಬದ ಕಣ್ಣೀರಿಗೆ ವ್ಯಕ್ತವಾದ ಪ್ರತಿಕ್ರಿಯೆ ಹೀಗಿದೆ.
'ದೇವೇಗೌಡರ ಕುಟುಂಬದ ಕಣ್ಣೀರಿನ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದ್ದು. ಮಂಡ್ಯ ಜನ ಸುರಕ್ಷಿತವಾದ ಸ್ಥಳಕ್ಕೆ ತೆರಳುವಂತೆ ಮನವಿ'.
'ಮತದಾನದ ದಿನ ಮತದಾನ ನಡೆಯುವ ಸ್ಥಳ ನದಿಯಾಗಿ ಬದಲಾವಣೆಯಾಗುವ ಸಾಧ್ಯತೆಯಿದೆ'
' ನೀವು ಅಳಬೇಡಿ, ನಿಮಗೆ ಏನು ಬೇಕೆಂದು ನಮಗೆ ಅರ್ಥವಾಗಿದೆ, ನಾವು ಕೊಡುತ್ತೇವೆ ಎಂದು ಟ್ಟಿಟ್ಟರ್ ನಲ್ಲಿ ಒಬ್ಬರು ಪೋಸ್ಟ್ ಹಾಕಿದ್ದಾರೆ,
ಇದೇ ವೇಳೆ ಸುಮಲತಾ ಅವರನ್ನು ಬೆಂಬಲಿಸುತ್ತಿರುವವರು ಮತ್ತು ಬಿಜೆಪಿ  ನಾಯಕರ ಫೇಸ್ ಬುಕ್ ಪೇಜ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಸಿದ್ದರಾಜು ಆರೋಪಿಸಿದ್ದಾರೆ, ಇದಕ್ಕೆಲ್ಲಾ ನಾವು ಹೆದರುವುದಿಲ್ಲ, ನಮ್ಮ ಬೆಂಬಲ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. 
SCROLL FOR NEXT